ರಾಜ್ಯದಲ್ಲಿ 2ನೇ ಪ್ಲಾಸ್ಮಾ ಥೆರೆಪಿ ಯಶಸ್ವಿ: ಕೊರೋನಾ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಚೇತರಿಕೆ….  

2nd- Plasma Therapy –Success-Recovery - Corona -Infected -bangalore
Promotion

ಬೆಂಗಳೂರು,ಜೂ,5,202(www.justkannada.in):  ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ನಡುವೆ ಕೊರೋನಾ ಸೋಂಕಿತ ವ್ಯಕ್ತಿ ಪ್ಲಾಸ್ಮಾ ಥೆರೆಪಿ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಮೂಲಕ ರಾಜ್ಯದಲ್ಲಿ 2ನೇ ಪ್ಲಾಸ್ಮ ಥೆರೆಪಿ ಯಶಸ್ವಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಮಧ್ಯ ವಯಸ್ಕ ವ್ಯಕ್ತಿ ಪ್ಲಾಸ್ಮಾ ಥೆರಪಿಯಿಂದ ಚೇತರಿಸಿಕೊಂಡಿದ್ದಾರೆ. ಮೂರು ದಿನಗಳ ಹಿಂದಷ್ಟೇ ಪ್ಲಾಸ್ಮಾ ಥೆರಪಿಯಿಂದ ಹುಬ್ಬಳ್ಳಿಯ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದ ಕುರಿತು ವರದಿಯಾಗಿತ್ತು.2nd- Plasma Therapy –Success-Recovery - Corona -Infected -bangalore

ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಸೋಂಕಿತ ವ್ಯಕ್ತಿಗೆ ಮಾಡಿದ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾದಂತಾಗಿದೆ. ಕೊರೊನಾ ಸೋಂಕಿನ ಜೊತೆಗೆ ಈ ವ್ಯಕ್ತಿ  ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ  ಮೇ27 ರಂದು ಪ್ಲಾಸ್ಮಾ ಥೆರೆಪಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಸೋಂಕಿತ ವ್ಯಕ್ತಿ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

Key words: 2nd– Plasma Therapy –Success-Recovery – Corona -Infected -bangalore