ದೇಶದಲ್ಲಿ ಒಂದೇ ದಿನ 2,95,041 ಹೊಸ ಕೊರೋನಾ ಪ್ರಕರಣಗಳು ಪತ್ತೆ…

Promotion

ನವದೆಹಲಿ,ಏ,21,2021(www.justkannada.in):  ದೇಶದಲ್ಲಿ  ಕೊರೋನಾ 2ನೇ ಅಲೆ ಜೋರಾಗಿದ್ದು ಒಂದೇ ದಿನ 2,95,041 ಹೊಸ ಕೊರೋನಾ ಪ್ರಕರಣಗಳು  ಪತ್ತೆಯಾಗಿವೆ.jk

ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,95,041 ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, 2,023  ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆ 1,56,16,130ಕ್ಕೆ ಏರಿಕೆಯಾಗಿದ್ದು, ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ1,82,553ಕ್ಕೆ ತಲುಪಿದೆ.

ಸೋಂಕಿನಿಂದ 1,67,457 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖವಾಗಿರುವ ಸಂಖ್ಯೆ 1,32,76,039ಕ್ಕೆ ಏರಿಕೆಯಾಗಿದೆ.  ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 21,57538ಕ್ಕೆ ತಲುಪಿದೆ.2,95,041 -new corona -cases -detected - single day - country

ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳು 62,097 ಪ್ರಕರಣಗಳೊಂದಿಗೆ ಮಹಾರಾಷ್ಟ್ರ, ನಂತರ ಉತ್ತರ ಪ್ರದೇಶ 29,574 ಪ್ರಕರಣ, ದೆಹಲಿ 28,395 ಪ್ರಕರಣ ಕರ್ನಾಟಕ 21,794 ಪ್ರಕರಣ ಮತ್ತು ಕೇರಳ 19,577 ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.

ENGLISH SUMMARY….

2,95,041 new Corona cases in country in last 24 hours!
New Delhi, Apr. 21, 2021 (www.justkannada.in): The second wave of the COVID-19 Pandemic is almost uprooting the daily life of the countrymen. As many as 2,95,041 new Corona cases were reported in the last 24 hours in the country!
According to the Union Health Minister, 2,023 people died of Corona in the last 24 hours increasing the tally to 1,82,553. The total number of COVID infections has increased to 1,56,16,130.2,95,041 -new corona -cases -detected - single day - country
As many as 1,67,457 have recovered increasing the tally to 1,32,76,039 and the total number of active cases has reached 21,67,538.
The five states which have reported highest number of Corona cases are: Maharashtra (62,097); Uttar Pradesh (29,574); Delhi (28,395), Karnataka (21,794) and Kerala (19,577).
Keywords: 2,95,041 new Corona cases/ last 24 hours/ Union Health Ministry/ COVID-19 Pandemic

Key words: 2,95,041 -new corona -cases -detected – single day – country