ದೇಶದಲ್ಲಿ ಹೊಸದಾಗಿ 2,67,334 ಕೊರೋನಾ ಪ್ರಕರಣಗಳು ಪತ್ತೆ…  

Promotion

ನವದೆಹಲಿ,ಮೇ,19,2021(www.justkannada.in) ದೇಶದಲ್ಲಿ  ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದ್ದು,  ಒಂದೇ ದಿನ ದೇಶದಲ್ಲಿ 2,67,334 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಪತ್ತೆಯಾಗಿದೆ.jk

ದಿನ ನಿತ್ಯ ಕೊರೋನಾ ಸೋಂಕಿನ ಪ್ರಕರಣ 3 ಲಕ್ಷ ಗಡಿದಾಟುತ್ತಿತ್ತು. ಇದೀಗ ಕಳೆದ ಎರಡು ದಿನಗಳಿಂದ ದಿನದಲ್ಲಿ ಪತ್ತೆಯಾಗುವ ಸೋಂಕಿನ ಪ್ರಮಾಣ 2 ಲಕ್ಷಕ್ಕೆ ಇಳಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,67,334 ಮಂದಿಗೆ ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 2,54,96,330 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4,529 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ, ಈ ಮೂಲಕ ಕೊರೊನಾ ಸೋಂಕಿಗೆ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 2,83,248 ಕ್ಕೆ ಏರಿಕೆಯಾಗಿದೆ.267334-corona-cases-country-single-day

ಈವರೆಗೆ  2,19,86,363 ಮಂದಿ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ 32,26,719 ಸಕ್ರಿಯ ಪ್ರಕರಣಗಳಿವೆ.

Key words:  2,67,334 corona cases- country-single day