Tuesday, September 29, 2026

BDA Apartments

ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ಘೋಷಿಸಿದ ದೆಹಲಿ ಸಿಎ...
Home Front Page ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ಘೋಷಿಸಿದ ದೆಹಲಿ ಸಿಎಂ ಅರವಿಂದ...

ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ಘೋಷಿಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್….

ನವದೆಹಲಿ,ಮೇ,18,2021(www.justkannada.in):  ಕೊರೋನಾದಿಂದ ಮೃತಪಟ್ಟ ಪ್ರತಿ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಘೋಷಿಸಿದ್ದಾರೆ.jk

ಕೊರೋನಾದಿಂದ ಮೃತಪಟ್ಟಂತಹ ವ್ಯಕ್ತಿಯ ಕುಟುಂಬಗಳಿಗೆ ಪರಿಹಾರದ ಜೊತೆಗೆ ಪ್ರತಿ ತಿಂಗಳು 2500 ಪಿಂಚಣಿಯನ್ನು ಘೋಷಿಸಲಾಗಿದೆ. ಮೃತರ ಕುಟುಂಬದ ಮಕ್ಕಳಿಗೆ ತಿಂಗಳಿಗೆ 2500 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ತಂದೆ, ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ 25 ವರ್ಷದವರೆಗೆ ಪಿಂಚಣಿ ಸೌಲಭ್ಯ ನೀಡಲಾಗುವುದು ಎಂದು  ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.delhi-cm-arvind-kejriwal-announces-rs-50000-relief-kovids-death-family

ಜತೆಗೆ ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತವಾಗಿ ನೀಡಲಾಗುವುದು. ರೇಷನ್ ಕಾರ್ಡ್ ಇಲ್ಲದವರಿಗೂ ಉಚಿತ ಅಕ್ಕಿ ವಿತರಿಸಲಾಗುತ್ತದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

Key words: Delhi CM- Arvind Kejriwal -announces -Rs. 50,000 relief – Kovid’s -death -family