ಇಂಧನ ಶಕ್ತಿ ಉತ್ಪಾದನೆಗೆ  2 ಲಕ್ಷ ಕೋಟಿ ರೂ. ಅನುದಾನ ಮೀಸಲು- ಸಿಎಂ ಬಸವರಾಜ ಬೊಮ್ಮಾಯಿ.

Promotion

ಬೆಂಗಳೂರು,ಫೆಬ್ರವರಿ,6,2023(www.justkannada.in): ಇಂಧನ ಶಕ್ತಿ ಉತ್ಪಾದನೆಗೆ  2 ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಶೇ.20ರಷ್ಟು ಎಥನಾಲ್ ಉತ್ಪಾದನೆಯೇ ನಮ್ಮ ಗುರಿ ಎಂದು  ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಮಾದಾವರ ಬಳಿಯ  ಬಿಐಇಸಿಯಲ್ಲಿ ನಡೆಯುತ್ತಿರುವ  ಇಂಧನ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ರಾಜ್ಯದಲ್ಲಿ ಇಂಧನ ಸಪ್ತಾಹ ಆಚರಿಸುತ್ತಿರುವುದಕ್ಕೆ ಧನ್ಯವಾದಗಳು. ಕೊರೋನಾ ನಂತರ ಜೀವನದ ವ್ಯಾಖ್ಯಾನ ಬದಲಾಗಿದೆ. ಹೊಸ ಗುರಿ ಇಟ್ಟುಕೊಂಡು ಮುಂದೆ ಸಾಗುತ್ತಿದ್ದೇವೆ.   ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆ ದೊಡ್ಡ ಸವಾಲಾಗಿದೆ.   ಮೋದಿ ಗುಜರಾತ್ ಸಿಎಂ ಆಗಿದ್ದಾಗ ಕ್ರಾಂತಿಕಾರಕ ಬದಲಾವಣೆ ಮಾಡಿದ್ದಾರೆ.  ಕರ್ನಾಟಕ ಅತಿಹೆಚ್ಚು ಮಾಲೀನ್ಯ ರಹಿತ ಇಂಧನ ಉತ್ಪಾದಿಸುವ ರಾಜ್ಯವಾಗಿದೆ.

9 ಉದ್ದಿಮಗಳು ಕರ್ನಾಟಕದಲ್ಲಿ ಹೂಡಿಕೆಗೆ ಮುಂದೆ ಬಂದಿವೆ. ಕರ್ನಾಟಕ ವಿದ್ಯುತ್ ವಾಹನಗಳ ಅತಿ ಹೆಚ್ಚು ಉತ್ಪಾದಕ ರಾಜ್ಯವಾಗಲಿದೆ.  ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ  ಬಗ್ಗೆ ಅತಿಹೆಚ್ಚು ಸಂಶೋಧನೆ ನಡೆಸಲಾಗಿದೆ.  ಭಾರತದಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಎಥನಾಲ್ ಉದ್ಪಾದನೆ ಮಾಡಲಾಗುತ್ತಿದೆ ಎಂದರು.

ಶೇ. 20ರಷ್ಟು ಎಥನಾಲ್ ಉತ್ಪಾದನೆಯೇ ನಮ್ಮ ಗುರಿ. ಇಂಧನ ಶಕ್ತಿ ಉತ್ಪಾದನೆಗೆ  2 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ.  ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Key words: 2 lakh -crore – energy- production- CM-Basavaraja Bommai.