ಪ್ರತಿ ಎಪಿಎಂಸಿಗೆ 2 ರಿಂದ 15 ಕೋಟಿ ರೂ. ಹಣ ಕೊಡಲು ಸಿಎಂ ಒಪ್ಪಿಗೆ-ಸಚಿವ ಎಸ್.ಟಿ ಸೋಮಶೇಖರ್.

Promotion

ಮೈಸೂರು,ಜುಲೈ,25,2021(www.justkannada.in): ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪ್ರತಿ ಎಪಿಎಂಸಿಗೆ 2 ರಿಂದ 15 ಕೋಟಿ ರೂ. ಹಣ ಕೊಡಲು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.jk

ಬಿಜೆಪಿರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್ , ರೈತರ ಅನುಕೂಲಕ್ಕೆ ಎಪಿಎಂಸಿ ಕಾಯ್ದೆ ತರಲಾಗಿದೆ. ಬಹಳ ವ್ಯವಸ್ಥಿತವಾಗಿ ಎಪಿಎಂಸಿಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ  ಪ್ರತಿ ಎಪಿಎಂಸಿಗೆ 2 ರಿಂದ 15 ಕೋಟಿ ಹಣ ಕೊಡಲು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಸದ್ಯದಲ್ಲೇ ಇದಕ್ಕೆ ಚಾಲನೆ ನೀಡಲಿದ್ದೇವೆ ಎಂದು ತಿಳಿಸಿದರು.

ಈ ಬಾರಿ ಸಹಕಾರಿ ಬ್ಯಾಂಕ್ ಗಳ ಮೂಲಕ 20800 ಕೋಟಿ ಸಾಲದ  ನೀಡುವ ಗುರಿ ಹೋಂದಿದ್ದೇವೆ. 21 ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಲು ಚಾಲನೆ ನೀಡಿದ್ದೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: 2 – 15 crores – APMC-CM -agreed -Minister -ST Somashekhar.