ಕಲಬುರಗಿಯಲ್ಲಿ 1,350 ಕೆಜಿ ಗಾಂಜಾ ಜಪ್ತಿ, ನಾಲ್ವರ ಬಂಧನ

Promotion

ಕಲಬುರ್ಗಿ,ಸೆಪ್ಟೆಂಬರ್,13,2020(www,justkannada.in) : ಕಲಬುರಗಿಯಲ್ಲಿ 1,350 ಕೆಜಿ ದಾಖಲೆಯ ಗಾಂಜಾ ಜಪ್ತಿ ಮಾಡಿ ನಾಲ್ವರನ್ನು ಬಂಧಿಸಲಾಗಿದೆ.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಡ್ರಗ್ಸ್ ದಂಧೆ ವಿರುದ್ಧ ಸಮರ ಸಾರಲಾಗುತ್ತಿರುವ ಮಧ್ಯೆಯೇ, ರಾಜ್ಯದ ಇತಿಹಾಸದಲ್ಲೇ ದಾಖಲೆ ಮೊತ್ತದ 1,350 ಕೆಜಿ ಗಾಂಜಾವನ್ನು ಬೆಂಗಳೂರು ಪೊಲೀಸರು ಕಲಬುರಗಿಯಲ್ಲಿ ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಗಾಂಜಾ ಸಾಗಿಸುತ್ತಿದ್ದ ಜ್ಞಾನೇಶ್ವರ್ (37), ಸಿದ್ಧನಾಥ್ (22),  ನಾಗನಾಥ್ ( 39), ಚಂದ್ರಕಾಂತ್ (34) ನಾಲ್ವರನ್ನು ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಒಡಿಶಾದಿಂದ ರಾಜ್ಯಕ್ಕೆ ಲಾರಿ ಮೂಲಕ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಈ ಸಂದರ್ಭ ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ಬೆಂಗಳೂರಿನ ಶೇಷಾದ್ರಿ ಪುರಂ ಪೊಲೀಸರು ಕಾರ್ಯಾಚರಣೆ ನಡೆಸಿ 4ರಿಂದ 6 ಕೋಟಿ ರೂ‌. ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

key words : 1,350 kg-marijuana-confiscation-four-arrested-Kalaburagi