10 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ : ಸಾಗಾಟಕ್ಕೆ ಬಳಸಿದ 18 ವಾಹನಗಳ ಜಪ್ತಿ ಮಾಡಿದ ಅಬಕಾರಿ ಪೊಲೀಸರು….

Promotion

ಮೈಸೂರು,ಡಿಸೆಂಬರ್,19,2020(www.justkannada.in): ಮೈಸೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಚಟುವಟಿಕೆ ಕಂಡುಬಂದ ಹಿನ್ನೆಲೆ ಅಬಕಾರಿ ಪೊಲೀಸರು ದಾಳಿ ನಡೆಸಿ ಸುಮಾರು 10 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಮದ್ಯ ಸಾಗಾಟಕ್ಕೆ ಬಳಸಿದ್ದ 18 ವಾಹನಗಳನ್ನ ಜಪ್ತಿ ಮಾಡಿದ್ದಾರೆ. 10 lakh- worth –illicit- liquor- seized-mysore- Excise police

ಅಬಕಾರಿ ಉಪ ಆಯುಕ್ತೆ ಡಾ. ಮಹಾದೇವಿ ನೇತೃತ್ವದಲ್ಲಿ ರೇಡ್ ಮಾಡಿದ ಅಬಕಾರಿ ಪೊಲೀಸರು, 10,17,912 ಲಕ್ಷ ರೂ ಮೌಲ್ಯದ ಅಕ್ರಮ ಮಧ್ಯ ವಶಪಡಿಸಿಕೊಂಡಿದ್ದಾರೆ, 553.192 ಲೀ. ಮದ್ಯ ಮತ್ತು 16.470 ಲೀ. ಬಿಯರ್ ಬಾಟಲಿಗಳ ವಶಕ್ಕೆ ಪಡೆಯಲಾಗಿದೆ. ದಾಳಿ ಸಮಯದಲ್ಲಿ ಸಾಗಾಟಕ್ಕೆ ಬಳಸಿದ 18 ವಾಹನಗಳ ಜಪ್ತಿ ಮಾಡಲಾಗಿದೆ. 10 lakh- worth –illicit- liquor- seized-mysore- Excise police

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ಆಯೋಗ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಿದೆ. ಈ ಮಧ್ಯೆ ಅಬಕಾರಿ ಪೊಲೀಸರು ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ 165 ಕಡೆ ದಾಳಿ ನಡೆಸಿ 102 ಆರೋಪಿಗಳನ್ನು ಬಂಧಿಸಿದ್ದಾರೆ.

Key words: 10 lakh- worth –illicit- liquor- seized-mysore- Excise police