ಬಾಲಕನನ್ನ ಅಪಹರಿಸಿ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ 7 ಮಂದಿ ಅಂದರ್.

Promotion

ಹುಬ್ಬಳ್ಳಿ,ಆಗಸ್ಟ್,10,2022(www.justkannada.in):  ಬಾಲಕನನ್ನ ಅಪಹರಿಸಿ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ 7 ಮಂದಿ ಅಪಹರಣಕಾರರನ್ನ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ  ಗರೀಬ್ ನವಾಜ್ ಮುಲ್ಲಾ ಎಂಬ ಯುವಕನ ಅಪಹರಣ ಪ್ರಕರಣ ಸುಖಾಂತ್ಯವಾಗಿದೆ. ಮಹಮದ್ ಆರಿಫ್, ಇಮ್ರಾನ್ ತೌಸಿಫ್, ಹುಸೇನ್ ಸಾಬಾ, ಅಬ್ದಲು ಕರೀಂ, ಇಮ್ರಾನ್ ಮದರಲಿ, ಮಹಮದ್ ರಜಾಕ್ ಸೇರಿ 7 ಮಂದಿಯನ್ನ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗರೀಬ್ ನವಾಜ್ ಮುಲ್ಲಾ  ಆನ್ ಲೈನ್ ಗೇಮ್ ನಲ್ಲಿ 1 ಕೋಟಿ ರೂ. ಗೆದ್ದಿದ್ದನು. ಈ ವಿಷಯವನ್ನು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದನು.  ಈ ವಿಷಯ ತಿಳಿದು, ಆ ಬಾಲಕನನ್ನು ಅಪಹರಿಸಿದ 7 ಮಂದಿ ಅಪಹರಣಕಾರರು ಬಾಲಕನ ಪೋಷಕರಿಗೆ ಕರೆ ಮಾಡಿ, ಮಗನನ್ನು ಬಿಡಬೇಕಾದರೇ 1 ಕೋಟಿ ರೂ.  ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಭಯಗೊಂಡಂತ ನವಾಜ್ ಮುಲ್ಲಾ ಪೋಷಕರು, ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಗೆ ಮಗನ ಅಹರಹಣ ಸಂಬಂಧ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು, ಅಪಹರಣಕಾರರ ಮೊಬೈಲ್ ಲೊಕೇಷನ್ ಆಧಾರದ ಮೇಲೆ 7 ಅಪಹರಣಕಾರರನ್ನು ಬಂಧಿಸಿದ್ದಾರೆ.

Key words: 1 crore –after- kidnapping – boy- 7 people-arrest