ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಾಹಿತಿ ಎಸ್.ಎಲ್ ಭೈರಪ್ಪ.   

ಮೈಸೂರು,ನವೆಂಬರ್,23,2021(www.justkannada.in):  ಕೇಂದ್ರದ ಯೋಜನೆಯಿಂದ ಚಾಮುಂಡಿಬೆಟ್ಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಾಹಿತಿ ಎಸ್.ಎಲ್ ಭೈರಪ್ಪ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಾಹಿತಿ ಎಸ್ ಎಲ್ ಭೈರಪ್ಪ, ಕೇಂದ್ರದ ಪ್ರಸಾದ ಯೋಜನೆಯಿಂದ ಚಾಮುಂಡಿ ಬೆಟ್ಟಕ್ಕೆ ತೊಂದರೆ ಇದೆ. ಚಾಮುಂಡಿ ಬೆಟ್ಟ ಕಾಂಕ್ರಿಟ್ ಕಾಡು ಮಾಡುವ ಯೋಜನೆಯನ್ನ ಅನುಸ್ಠಾನಗೊಳಿಸಬಾರದು. ಚಾಮುಂಡಿ ಬೆಟ್ಟಕ್ಕೆ ಹೋಗುವ ವಾಹನಗಳಿಗೆ ನಿರ್ಬಂಧಿಸಬೇಕು. ಪರಿಸರ ಸ್ನೇಹಿತ ವಿದ್ಯುತ್ ಚಾಲಿತ ವಾಹನ ಬಸ್ ಚಾಲನೆ ಬಳಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ ಚಾಮುಂಡಿ ಬೆಟ್ಟದಲ್ಲಿ 4 ಸಾವಿರ ಜನ ವಾಸವಿದ್ದಾರೆ. ಅವರನ್ನ ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು. ಅರ್ಚಕರು, ಸಿಬ್ಬಂದಿಗಳು  ಇರಲು ಅವಕಾಶ ಮಾಡಿಕೊಡಬೇಕು ಎಂದು ಪ್ರಧಾನಿ ಮೋದಿಗೆ ಸಾಹಿತಿ ಎಸ್.ಎಲ್ ಭೈರಪ್ಪ ಮನವಿ ಮಾಡಿದ್ದಾರೆ.

Key words: SL Bhairappa – letter – PM Modi – save – Chamundi hill.