ಸಿಎಂ ಮನೆ ಭದ್ರತೆಗಿದ್ದ ಪೊಲೀಸರಿಂದ ಗಾಂಜಾ ಮಾರಾಟ: ಇಬ್ಬರು ಸಸ್ಪೆಂಡ್- ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ.

Promotion

ಬೆಂಗಳೂರು,ಜನವರಿ,20,2022(www.justkannada.in): ಸಿಎಂ ಮನೆ ಭದ್ರತೆಗಿದ್ದ ಪೊಲೀಸರಿಂದ ಗಾಂಜಾ ಮಾರಾಟ ಮಾಡಿದ ಆರೋಪದಲ್ಲಿ ಇಬ್ಬರು ಪೊಲೀಸರನ್ನ ಸಸ್ಪೆಂಡ್ ಮಾಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ  ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕೆಲ ಪೊಲೀಸರಿಂದ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ. ಸಿಎಂ ಮನೆ ಭದ್ರತೆಗಿದ್ದ ಪೊಲೀಸರಿಂದ ಗಾಂಜಾ ಮಾರಾಟ ಆರೋಪ ಹಿನ್ನೆಲೆಯಲ್ಲಿ ಡ್ರಗ್ಸ್ ಮಾರಿದ್ಧ ಇಬ್ಬರು ಪೊಲೀಸರನ್ನ ಅಮಾನತುಗೊಳಿಸಲಾಗಿದೆ.

ಸಸ್ಪೆಂಡ್ ಅಲ್ಲ ಕೆಲಸದಿಂದ  ವಜಾಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದೇವೆ.  ಇಬ್ಬರು  ಪೊಲೀಸರು ಬೇಲ್ ಪಡೆದು ಹೊರ ಬಂದಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

Key words: CM –home- security- Two suspend-Home Minister -Arga Jnanendra