ಶ್ರಮಪಡದ ಜೆಡಿಎಸ್ ಕಾರ್ಯಕರ್ತರು: ಪಕ್ಷಕ್ಕಾಗಿ ದುಡಿದ ಸೂರಜ್‌ ರೇವಣ್ಣಗೆ ಈಗ ಟಿಕೆಟ್- ವ್ಯಂಗ್ಯವಾಡಿದ ರಾಜ್ಯ ಬಿಜೆಪಿ ಘಟಕ

Promotion

ಬೆಂಗಳೂರು,ನವೆಂಬರ್,19,2021(www.justkannada.in): ರಾಜ್ಯ ರಾಜಕೀಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ಎಂಟ್ರಿಕೊಟ್ಟಿದ್ದು,  ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಈ ನಡುವೆ ಕುಟುಂಬ ರಾಜಕಾರಣದ ಬಗ್ಗೆ ಟ್ವಿಟ್ಟರ್ ನಲ್ಲಿ ಟೀಕೆ ಮಾಡಿರುವ ರಾಜ್ಯ ಬಿಜೆಪಿ ಘಟಕ, ಪಕ್ಷಕ್ಕೋಸ್ಕರ ದುಡಿಮೆ ಮಾಡಿ, ಅಧಿಕಾರ ನಿಮ್ಮದೇ ಆಗಿರುತ್ತೆ ಎಂದು ಈ ಹಿಂದೆ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಜೆಡಿಎಸ್ ಕಾರ್ಯಕರ್ತರು ಶ್ರಮ ಪಡದ ಕಾರಣ ಟಿಕೆಟ್ ನೀಡಿಲ್ಲ. ಪಕ್ಷಕ್ಕಾಗಿ ದುಡಿದ ಸೂರಜ್‌ ಗೆ ಈಗ ಟಿಕೆಟ್ ನೀಡಲಾಗಿದೆ ಎಂದು ವ್ಯಂಗ್ಯವಾಡಿದೆ.

ಕುಟುಂಬ ರಾಜಕಾರಣದಲ್ಲೂ ಮಾನದಂಡ ಹುಡುಕಿದರೆ ಅಲ್ಲಿಯೂ ದೇವೇಗೌಡರದ್ದು ಒಂದು ಆದರ್ಶ ಕುಟುಂಬ. ಒಂದೇ ಕುಟುಂಬದ 8 ಜನರು ಸ್ಥಾನಮಾನ ಪಡೆದ ಪಕ್ಷ. ರಾಜಕಾರಣದಲ್ಲಿ ಸ್ಥಾನಮಾನ ಪಡೆದ ರಾಜ್ಯದ ಏಕೈಕ ಪಕ್ಷ ಜೆಡಿಎಸ್. ಈ ಹೆಗ್ಗಳಿಕೆ ಪಡೆಯಲು ಕಾರಣವಾದ ಯತ್ನಕ್ಕೆ ಅಭಿನಂದನೆ ಎಂದು ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದೆ.

ಜೆಡಿ ಎಸ್​ನಲ್ಲಿ ದೇವೇಗೌಡರ ಕುಟುಂಬದ ಎಲ್ಲ ಕವಲುಗಳೂ ರಾಜಕೀಯ ಸ್ಥಾನಮಾನ ಪಡೆಯುತ್ತಿದೆ. ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಹೆಚ್‌ಡಿಕೆ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಎಲ್ಲರೂ ರಾಜಕೀಯ ಸ್ಥಾನಮಾನ ಪಡೆಯುತ್ತಿದ್ದಾರೆ. ಕುಟುಂಬದ ಉಳಿವಿಗಾಗಿ ಕಾರ್ಯಕರ್ತರ ತ್ಯಾಗ ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಘಟಕ  ಟೀಕಿಸಿದೆ.

Key words: JDS-activists – do not –work- hardTickets –Suraj revanna -state BJP unit