ವಿಧಾನಪರಿಷತ್ ಚುನಾವಣೆ:  ಸಿಎಂ ಬೊಮ್ಮಾಯಿ ಅವರಿಂದ ಮತದಾನ.

Promotion

ಹಾವೇರಿ, ಡಿಸೆಂಬರ್ 10,2021(www.justkannada.in):  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಇಂದು ಚುನಾವಣೆ  ಮತದಾನ ನಡೆಯುತ್ತಿದ್ದು ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ಮಾಡಲು ಅವಕಾಶವಿದೆ.

ಸಿಎಂ ಬಸವರಾಜ ಬೊಮ್ಮಾಯಿ ಇಂದು ಹಾವೇರಿ ಜಿಲ್ಲೆ ಶೀಗ್ಗಾಂವಿ ತಾ.ಪಂ ಕಚೇರಿ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.  ಬೆಂಗಳೂರು, ಮೈಸೂರು-ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಹಾವೇರಿ ಸೇರಿ ಹಲವು ಕಡೆಗಳಲ್ಲಿ ಮತದಾನ ನಡೆಯುತ್ತಿದ್ದು  ಮತದಾನ ಕೇಂದ್ರಗಳ ಸುತ್ತಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ 20 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಸಿದರೇ ಜೆಡಿಎಸ್‌ನ 6ಸ್ಥಾನಗಳಲ್ಲಿ ಸ್ಪರ್ಧಿಸಿದೆ.

ಮತದಾನಕ್ಕಾಗಿ ಒಟ್ಟು 6072 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 23,065 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರೇ ಮತದಾರರರು. 90 ಅಭ್ಯರ್ಥಿಗಳ ಪೈಕಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾತ್ರ ಒಬ್ಬರು ಮಹಿಳಾ ಅಭ್ಯರ್ಥಿ ಕಣದಲ್ಲಿದ್ದಾರೆ.

Key words: legislative Council –election-Voting – CM Bommai

ENGLISH SUMMARY…

LC elections: CM Bommai exercises his franchise
Haveri, December 10, 2021 (www.justkannada.in): The elections for the legislative council from the local bodies for 25 seats are being held today. The voting, which commenced at 8.00 am today, will continue till 4.00 pm.
The Chief Minister Basvaraj Bommai exercised his franchise at the Taluk Panchayat voting booth, Shiggaon, in Haveri District. Voting is going at Bengaluru, Mysuru-Chamarajanagara, Shivamogga, Chikkamgaluru, Haveri, and other constituencies. Police security has been provided for the smooth conduct of the voting process.
The results of this election will be announced on December 14. A total number of 90 candidates are in the fray. While the BJP and Congress have fielded 20 candidates, the JDS has fielded its candidates in six places.
A total number of 6072 voting booths have been established, with a total number of 23,065 staff. The members of the local bodies are the voters in this election. Out of the total 90 candidates, there is only one woman candidate in Chikkamagaluru.
Keywords: Legislative Council elections/ CM Basavaraj Bommai/ voting