ಬೆಳಗಾವಿಯಲ್ಲಿ ಪುಂಡಾಟ ಮೆರೆದಿದ್ಧ 27 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ.

Promotion

ಬೆಳಗಾವಿ,ಡಿಸೆಂಬರ್,18,2021(www.justkannada.in):    ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಹಾನಿಗೊಳಿಸಿ, ಸರ್ಕರಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿದ್ದ 27 ಮಂದಿ ಆರೋಪಿಗಳಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಮೂಲಕ ನಿನ್ನೆ ತಡರಾತ್ರಿ ಹುಚ್ಚಾಟ ಮೆರೆದಿದ್ಧ ಎಂಇಎಸ್ ಪುಂಡರು ಇದೀಗ ಜೈಲುಪಾಲಾಗಿದ್ದಾರೆ.  ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿ, ವಿರೂಪಗೊಳಿಸಿದಂತ ಘಟನೆ ನಿನ್ನೆ ತಡರಾತ್ರಿ ನಡೆಯಿತ್ತು. ಈ ಘಟನೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ರಾಜಕೀಯ ನಾಯಕರು ಖಂಡಿಸಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತ ಎಚ್ಚರಿಕೆ ನೀಡಿದ್ದರು.

ಈ ಬೆನ್ನಲ್ಲೇ, ಪೊಲೀಸರು 27 ಎಂಇಎಸ್ ಪುಂಡರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ಧರು. ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ  ನ್ಯಾಯಾಧೀಶರು 27 ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Key words: Judicial custody – 27 -accused –Belagavi- statue of Sangolli Raiyanna -destroyed