ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡರ ಅಟ್ಟಹಾಸ: ಕನ್ನಡಿಗರ ವಾಹನದ ಮೇಲೆ ಕಲ್ಲು ತೂರಾಟ.

ಮಹಾರಾಷ್ಟ್ರ,ಡಿಸೆಂಬರ್,18,2021(www.justkannada.in): ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆಗೆ ಹಾನಿ ಮಾಡಿ ಪುಂಡಾಟ ಮೆರೆದರೆ ಅತ್ತ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಶಿವಸೇನೆ ಪುಂಡರ ಅಟ್ಟಹಾಸ ಮೆರೆದಿದ್ದಾರೆ.

ಹೌದು, ಮಹಾರಾಷ್ಟ್ರದ ಸಾಂಗ್ಲಿಯ ಮಿರಜ್ ನಲ್ಲಿ ಕನ್ನಡಿಗರ ವಾಹನಗಳನ್ನ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಶಿವಸೇನೆ ಪುಂಡರು  ಮಹಾರಾಷ್ಟ್ರದ ಹಲವೆಡೆ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿದ್ದು, ಕನ್ನಡಿಗರ ವಾಹನದ ಮೇಲೆ ಮುಗಿಬಿದ್ದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅಲ್ಲದೆ ಕನ್ನಡಿಗರ ಹೋಟೆಲ್ ಗಳನ್ನ ಬಂದ್ ಮಾಡಿ ಶಿವಸೇನೆ ಪುಂಡರು ದಬ್ಬಾಳಿಕೆ ಮೆರೆದಿದ್ದಾರೆ. ಹಾಗೆಯೇ ಕೊಲ್ಲಾಪುರ ಹೊರವಲಯ ರಾ.ಹೆ 4ರಲ್ಲಿ ಕರ್ನಾಟಕದ ಲಾರಿಗಳನ್ನ ತಡೆದು ಕಪ್ಪು ಮಸಿ ಬಳಿದಿದ್ದಾರೆ.

Key words: ShivSena- Maharashtra-stone- throw -vehicle