ಫ್ಲೈಓವರ್ ಮೇಲೆ ಸೆಲ್ಫಿ ಮೋಜಿಗೆ ಹೋದ ಇಬ್ಬರು ಯುವಕರು ಬಲಿ

man-death-lack-of-oxygen-private-hospital-mysore
Promotion

ಬೆಂಗಳೂರು,12,2021(www.justkannada.in):  ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ತಾವರೇಕೆರೆ ಬಳಿ  ರಾ.ಹೆ. 75ರ ಫ್ಲೈಓವರ್ ನಲ್ಲಿ ಈ ಘಟನೆ ನಡೆದಿದೆ. ವೈಟ್ ಫಿಲ್ಡ್ ಮೂಲದ  ದಿನೇಶ್, ವಿನಯ್ ಮೃತ ಯುವಕರು. ಫ್ಲೈಓವರ್ ಮೇಲೆ ಇಬ್ಬರು ಯುವಕರು ಕಾರು ನಿಲ್ಲಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಈ ವೇಳೆ  ಕ್ಯಾಂಟರ್ ಡಿಕ್ಕಿಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನು ಮುಂದಾದರೂ ಫ್ಲೈ ಓವರ್ ಮೇಲೆ ಹೋಗುವಾಗ ಎಚ್ಚರ ಇರಬೇಕು. ಸೆಲ್ಫಿ ಮೋಜಿಗೆ ಹೋದ್ರೆ ಇದೇ ರೀತಿ ಪ್ರಾಣ ತೆತ್ತಬೇಕಾಗುತ್ತದೆ ಎಂಬುದು ಅರಿವಿರಬೇಕಿದೆ.

Key words: Two -young men- selfie –flyover-accident