ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಪ್ರತಿಭಟನೆ.

Promotion

ಮೈಸೂರು,ನವೆಂಬರ್,6,2021(www.justkannada.in): ಕುಕ್ಕರಹಳ್ಳಿಕೆರೆಯ ರಸ್ತೆ ಹಾಗೂ ಶೌಚಾಲಯಗಳ ದುರಸ್ತಿ ಕಾರ್ಯ ನಡೆಸುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಲೋಕೇಶ್ ಪಿಯಾ, ಪ್ರಸಿದ್ಧ ವಾಯು ವಿಹಾರ ಸ್ಥಳವಾದ ಕುಕ್ಕರಹಳ್ಳಿ ಕೆರೆ ಬಳಿ ಮಳೆಗಾಲದ ಸಂದರ್ಭದಲ್ಲಿ ವಯಸ್ಸಾದ ವೃದ್ಧರು ಮಕ್ಕಳು ನಡೆಯುವಾಗ ಕೆಳಗೆ ಬಿದ್ದು  ಕೈ ಕಾಲು ಮೂಳೆಗಳ ಮುರಿತ ದಿನ ದಿನ ಹೆಚ್ಚುತ್ತಿದೆ. ಸಕ್ಕರೆ ಕಾಯಿಲೆ ವ್ಯಕ್ತಿಗಳು ಶೌಚಾಲಯ ಬಳಸಲು ಯೋಗ್ಯವಾಗಿಲ್ಲ.

ದಯಮಾಡಿ ಮೈಸೂರು ವಿವಿ ಕುಲಪತಿಗಳಾದ ಹೇಮಂತ್ ಕುಮಾರ್  ಅವರು ಪರಿಶೀಲನೆ ನಡೆಸಿ ಆದಷ್ಟು ಬೇಗ ಕುಕ್ಕರಹಳ್ಳಿ ಕೆರೆಯ ರಸ್ತೆ ಹಾಗೂ ಶೌಚಾಲಯಗಳ ದುರಸ್ತಿ ಕಾರ್ಯ ನಡೆಸಬೇಕು ಎಂದು ಮನವಿ ಮಾಡಿದರು. ಪ್ರಶಾಂತ್ ಆರ್ಯ. ಶೇಖರ್. ಮಂಜು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Key words: Protest-mysore city corporation-Corporator- – Lokesh Pia