ಪರಿಷತ್ ಚುನಾವಣೆ ಗೆಲ್ಲಲು ಕೇಸರಿ ಪಾಳಯ ತಂತ್ರ: ನ.19 ರಂದು ಜನ ಸ್ವರಾಜ್ ಯಾತ್ರೆಗೆ ಚಾಲನೆ.

Promotion

ಮೈಸೂರು,ನವೆಂಬರ್,13,2021(www.justkannada.in):  ರಾಜ್ಯ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರು ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಪರಿಷತ್ ನಲ್ಲಿ ನ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಕೇಸರಿ ಪಾಳಯ ತಂತ್ರ ಹೆಣೆಯುತ್ತಿದೆ.

ಈ ಮಧ್ಯೆ ಮೈಸೂರು ಚಾಮರಾಜ ನಗರ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಗ್ರಾಮ ಪಂಚಾಯತಿ ಸದಸ್ಯ ಮತದಾರನ್ನು ಒಲೈಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನ ಸ್ವರಾಜ್ ಯಾತ್ರೆ ಹಮ್ಮಿಕೊಂಡಿದೆ.

ನಾಲ್ಕು ವಿಭಾಗಗಳಲ್ಲಿ ಜನ ಸ್ವರಾಜ್ ಯಾತ್ರೆ ನಡೆಯಲಿದ್ದು ನ. 19 ರಂದು ಯಾತ್ರೆಗೆ ಚಾಲನೆ ಸಿಗಲಿದೆ. ಮೈಸೂರು ವಿಭಾಗಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ಉಸ್ತುವಾರಿಯಾಗಿದ್ದು, ಜನ ಸ್ವರಾಜ್ ಯಾತ್ರೆ ಮುನ್ನವೇ ಬಿಜೆಪಿ ಅಭ್ಯರ್ಥಿ  ಘೋಷಣೆ ಮಾಡುವ  ಸಾಧ್ಯತೆ ಇದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲವರ್ದನೆಗೆ ಪ್ಲಾನ್ ರೂಪಿಸಿದ್ದು ಸೂಕ್ಷ್ಮಾತಿ ಹಿಂದುಳಿದ ಸಮುದಾಯಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಕಳೆದ ಬಾರಿ ಅಲ್ಪ ಮತಗಳಿಂದ ಸೋಲು ಕಂಡಿದ್ದ ಬಿಜೆಪಿ‌, ಈ ಬಾರಿ ದ್ವಿಸದಸ್ಯ ಕ್ಷೇತ್ರದಲ್ಲಿ ಕಮಲ ಅರಳಿಸಲು ರೆಡಿಯಾಗಿದೆ.

ENGLISH SUMMARY…

BJP strategy to win MLC elections: Jan Swaraj Yatra on November 19
Mysuru, November 13, 2021 (www.justkannada.in): All the three major national parties have started chalking out various strategies to win the Legislative Council elections for 25 seats in the State. The BJP has also come up with a strategy to ensure the victory of its candidates.
The BJP which is also making preparations to ensure the victory of its candidates in the Mysuru-Chamarajanagara local body council elections has organized a state-wide ‘Jan Swaraj Yatra’ in order to please the Gram Panchayat voters.
The Yatra will be held in four divisions and will be launched on November 19. Minister K.S. Eshwarappa has been appointed as the Mysuru Division in Incharge. The BJP is also expected to announce the name of its candidate before the launching of the ‘Jan Swaraj Yatra.’
The BJP has come with a plan to strengthen its base in the old Mysuru region. As a result of this, it has eyed the micro minority communities. The BJP had lost with a thin margin and hence is leaving no stone unturned to ensure its victory this time.
Keywords: BJP/ MLC elections/ strategy

Key words: legislative council- election- bjp-mysore- chamarajanagar