ನಿಖಿಲ್ ಕಲ್ಯಾಣಕ್ಕೆ ರಾಮನಗರ, ಚನ್ನಪಟ್ಟಣದಲ್ಲಿ ಜಾಗ ಹುಡುಕುತ್ತಿರುವ ಕುಮಾರಸ್ವಾಮಿ

Promotion

ಬೆಂಗಳೂರು, ಫೆಬ್ರವರಿ 13, 2020 (www.justkannada.in): ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಏಪ್ರಿಲ್ 17 ಕ್ಕೆ ನಿಗದಿ ಆಗಿದೆ.

ವಿವಾಹ ಮಹೋತ್ಸವವನ್ನು ತಮಗೆ ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ರಾಮನಗರ ಮತ್ತು ಚನ್ನಪಟ್ಟಣ ಮಧ್ಯೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಮದುವೆಗೆ ಇನ್ನೆರಡೇ ತಿಂಗಳು ಬಾಕಿ ಉಳಿದಿರುವುದರಿಂದ, ನಿನ್ನೆ ರಾಮನಗರ ಮತ್ತು ಚನ್ನಪಟ್ಟಣದ ಮಧ್ಯದಲ್ಲಿ ಮದುವೆ ನಡೆಯುವ ಸ್ಥಳವನ್ನ ಭಾವಿ ಬೀಗರ ಜೊತೆಗೆ ಎಚ್.ಡಿ.ಕುಮಾರಸ್ವಾಮಿ ವೀಕ್ಷಿಸಿದ್ದಾರೆ.

ರಾಮನಗರದ ಹೊರವಲಯದಲ್ಲಿರುವ ಜನಪದ ಲೋಕದ ಹಿಂಭಾಗದ ಜಾಗದ ಜೊತೆಗೆ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೆ ಸೇರಿದ ಜಾಗವನ್ನೂ ಎಚ್.ಡಿ.ಕುಮಾರಸ್ವಾಮಿ ಮತ್ತು ರೇವತಿ ತಂದೆ ಮಂಜುನಾಥ್ ವೀಕ್ಷಿಸಿದರು.