ನಮಾಜ್ ಗೆ ಅವಕಾಶ ನೀಡಲು ವಿಧಾನಸೌಧ ಏನು  ಮೆಕ್ಕಾ ಮದೀನಾ ? ಪ್ರಮೋದ್ ಮುತಾಲಿಕ್ ಆಕ್ರೋಶ.

Promotion

ಹುಬ್ಬಳ್ಳಿ,ಜುಲೈ,11,2023(www.justkannada.in):  ವಿಧಾನಸಭೆಯಲ್ಲಿ ನಮಾಜ್​​ ಗೆ ಅವಕಾಶ ನೀಡುವ  ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ  ಪ್ರಮೋದ್ ಮುತಾಲಿಕ್, ವಿಧಾನಸೌಧ ಏನು ಮೆಕ್ಕಾ ಮದೀನಾ ? ಇದನ್ನೆನು ಮೆಕ್ಕಾ ಮದೀನಾ ಅಂತಾ ತಿಳಿದುಕೊಂಡಿದ್ದೀರಾ ? ಇದು ಡೆಂಜರಸ್ ಮಾನಸಿಕತೆ.  ವಿಧಾನಸೌಧ ಪವಿತ್ರ ದೇಗುಲ. ಅಲ್ಲಿ ನಮಾಜ್ ಮಾಡ್ತೀರಾ ನೀವು. ಕಡತದಿಂದ ವಾಪಸ್ ಆ ಮಾತು ತೆಗಿಯಗಿಬೇಕು. ಅವರಿಗೆ ಶಿಕ್ಷೆಯಾಗಬೇಕು. ಇದೇ ಕೋಮುವಾದ ಎಂದು ಕಿಡಿಕಾರಿದರು.

ಹಿಜಾಬ್ ಬಗ್ಗೆ ಚರ್ಚೆ ನಡೆದಾಗ ಗೌರವ ಕೊಡದೇ ಈಗ ನಮಾಜ್ ಮಾಡಲು ಜಾಗ ಕೇಳುತ್ತಿದ್ದಾರೆ. ಈಗ ನಮಾಜ್ ಮುಂದೆ ಮಸೀದಿ ದರ್ಗಾ ಅಂತಾರೆ. ಪವಿತ್ರ ಜಾಗದಲ್ಲಿ ನಮಾಜ್ ಅವಕಾಶ ಕೊಡಬಾರದು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

Key words: Namaz-Legislative assembly- Pramod Muthalik -outraged.