ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 37,379  ಕೋವಿಡ್ ಪ್ರಕರಣಗಳು ದೃಢ.

Promotion

ನವದೆಹಲಿ,ಜನವರಿ,4,2022(www.justkannada.in):  ದೇಶದಲ್ಲಿ ಕೋವಿಡ್ 3ನೇ ಅಲೆ ಮತ್ತು ಒಮಿಕ್ರಾನ್ ಭೀತಿ ಎದುರಾಗಿದ್ದು ಕೋವಿಡ್-19 ಸೋಂಕು ಹೆಚ್ಚುತ್ತಿದೆ.  ಕಳೆದ 24 ಗಂಟೆಗಳಲ್ಲಿ  ದೇಶದಲ್ಲಿ ಹೊಸದಾಗಿ 37,379 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ಈ  ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕಳೆದ ಕಳೆದ 24 ಗಂಟೆಗಳ 124 ಮಂದಿ  ಕೊರೋನಾಗೆ ಬಲಿಯಾಗಿದ್ದಾರೆ. ಆ ಮೂಲಕ ದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 4,82,017ಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದಲ್ಲಿನ ಸೋಂಕು ಸಕಾರಾತ್ಮಕ ದರ ಶೇ.3.24ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 11,007 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ ಒಟ್ಟಾರೆ ಗುಣಮುಖರ ಸಂಖ್ಯೆ 3,43,06,414ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ  1,71,830 ಸಕ್ರಿಯ ಪ್ರಕರಣಗಳಿವೆ ಎನ್ನಲಾಗಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 1892ಕ್ಕೆ ಏರಿಕೆಯಾಗಿದ್ದು  766 ಒಮಿಕ್ರಾನ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್  ಆಗಿದ್ದಾರೆ.

Key words: last 24 hours- 37,379 -new –covid cases – country