ಕಾಂಗ್ರೆಸ್ ಪಾದಯಾತ್ರೆ ಟೀಕಿಸಿದ ಹೆಚ್.ಡಿಕೆಗೆ ಟಾಂಗ್ ಕೊಟ್ಟ ಸಂಸದ ಡಿ.ಕೆ ಸುರೇಶ್.

Promotion

ಬೆಂಗಳೂರು,ಡಿಸೆಂಬರ್,28,2021(www.justkannada.in): ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ 9ರಿಂದ  ಕಾಂಗ್ರೆಸ್ ನಡೆಸುವ ಪಾದಯಾತ್ರೆ ಬಗ್ಗೆ  ಟೀಕಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಂಸದ ಡಿ.ಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಡಿ.ಕೆ ಸುರೇಶ್, ನಾವು ಪಾದಯಾತ್ರೆ ಮಾಡಿದರೆ ಹೈಜಾಕ್ ಅಂತಾರೆ. ಅವರು ಮಾಡಿದ್ರೆ ಮಾತ್ರ ಪಾದಯಾತ್ರೆ. ಬೇರೆಯವರು ಮಾಡಿದ್ರೆ ಹೈಜಾಕ್ ಆಗುತ್ತಾ ..? ಪಾದಯಾತ್ರೆ ರಾಮನಗರದ ಬಳಿ ಹೋಗುತ್ತದೆ.   ಅದಕ್ಕೆ  ಹೆಚ್.ಡಿ ಕುಮಾರಸ್ವಾಮಿ ವಿರೋಧ ಮಾಡುತ್ತಿದ್ದಾರೆ. ಅವರ ತಲೆಯಲ್ಲಿ ಏನಿದೆ ಅಂತಾ ನಮಗೇನು ಗೊತ್ತು..? ನಾವು ಕಾವೇರಿ ಹೋರಾಟ ಮಾಡುತ್ತಿದ್ದೇವೆ. ನಾವು ರಾಜಕೀಯದ ಬಗ್ಗೆ ಮಾತನಾಡಿದ್ದರೇ ಹೇಳಲಿ ಎಂದರು.cbi-attacks-dk-sivakumar-threatened-mp-dk-suresh

ಡಿಕೆಶಿ ಮೋದಿಯನ್ನು ಕಾಪಿ ಮಾಡಿದ್ದಾರೆ ಎಂಬ ಹೆಚ್ ಡಿಕೆ ಹೇಳಿಕೆಗೆ ಕಿಡಿಕಾರಿದ ಡಿ.ಕೆ ಸುರೇಶ್,  ಮೋದಿಯನ್ನೇ ಕೇಳಲಿ. ನಮ್ಮನ್ಯಾಕೆ ಕೇಳಬೇಕು.  ಪಂಚೆ ಯಾರೊಬ್ಬರ ಸ್ವತ್ತಲ್ಲ  ಪಂಚೆ ಅವರದ್ದು ಅಂತ ಪೇಟೆಂಟ್ ಇದ್ರೆ ಹೇಳಲಿ.  ಪೇಟೆಂಟ್ ಗೆ ಅರ್ಜಿ ಹಾಕುತ್ತೇವೆ ಎಂದು ಲೇವಡಿ ಮಾಡಿದರು.

Key words: MP -DK Suresh-Tong –HD Kumaraswamy