ಮೈಸೂರು ವಿವಿಯ ವಿದೇಶಿ ವಿದ್ಯಾರ್ಥಿನಿಗೆ ಒಮ್ರಿಕಾನ್ ಸೋಂಕು ದೃಢ.

ಮೈಸೂರು,ಡಿಸೆಂಬರ್,28,2021(www.justkannada.in): ಮೈಸೂರಿನಲ್ಲಿ ಮತ್ತೊಂದು ಓಮ್ರಿಕಾನ್ ಪ್ರಕರಣ ಪತ್ತೆಯಾಗಿದ್ದು, ಮೈಸೂರು ವಿಶ್ವ ವಿದ್ಯಾನಿಲಯದ ವಿದೇಶಿ ವಿದ್ಯಾರ್ಥಿನಿಗೆ ಒಮ್ರಿಕಾನ್  ಸೋಂಕು ತಗುಲಿದೆ.

ತಾಂಜೇನಿಯಾ ದೇಶದಿಂದ ಬಂದಿದ್ದ ವಿದ್ಯಾರ್ಥಿನಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಡಿಸೆಂಬರ್ 20ರಂದು ವಿದ್ಯಾರ್ಥಿನಿ ಆಗಮಿಸಿದ್ದು, ಈ ನಡುವೆ ಪರೀಕ್ಷೆ ವೇಳೆ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ ವಿದ್ಯಾರ್ಥಿನಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಗುರುತು ಪತ್ತೆಗೆ ಮೈಸೂರು ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಂಡಿದೆ.

ಇನ್ನು ಸೋಂಕಿತ  ವಿದೇಶಿ ವಿದ್ಯಾರ್ಥಿನಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಮೂಲಕ, ಕರ್ನಾಟಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 39 ಕ್ಕೆ ಏರಿಕೆ ಆಗಿದೆ.

Key words: Omrican- confirmed – foreign -student – Mysore