ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು.

Promotion

ಚಾಮರಾಜನಗರ,ಜೂ,2,2021(www.justkannada.in): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.jk

ಚಾಮರಾಜನಗರ ತಾಲೂಕಿನ ಎಚ್. ಮೂಕಹಳ್ಳಿಯಲ್ಲಿ  ಈ ಘಟನೆ ನಡೆದಿದೆ.  ಮಹದೇವಪ್ಪ(46), ಇವರ ಪತ್ನಿ ಮಂಗಳಮ್ಮ ಮತ್ತು ಮಕ್ಕಳಾದ ಜ್ಯೋತಿ, ಶ್ರುತಿ ಮೃತಪಟ್ಟವರು. ನಾಲ್ವರಿಗೆ ಕೊರೋನಾ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಅಕ್ಕಪಕ್ಕದ ಮನೆಯವರು ಬುಧವಾರ ಬೆಳಗ್ಗೆ ಕಿಟಕಿಯಲ್ಲಿ ನೋಡಿದ್ದು, ಒಳಗೆ ನೇಣುಬಿಗಿದ ಸ್ಥಿತಿಯಲ್ಲಿ ನಾಲ್ವರ ಶವ ಪತ್ತೆಯಾಗಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Four members – same family- commit suicide-chamarajanagar