ಎರಡು ಬೈಕ್ ನಡುವೆ ಡಿಕ್ಕಿ:  ಸ್ಥಳದಲ್ಲೇ ಮೂವರು ದುರ್ಮರಣ.

Promotion

ದಾವಣಗೆರೆ,ಡಿಸೆಂಬರ್,24,2021(www.justkannada.in):  ಎರಡು ಬೈಕ್ ನಡುವೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಹೊನ್ನಾಳಿ ತಾಲ್ಲೂಕಿನ ತಕ್ಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಹೊನ್ನಾಳಿಯ ಮಹೇಶಪ್ಪ ಸಂಜು ಪ್ರಶಾಂತ್ ಮೃತಪಟ್ಟವರು ಎಂದು  ಗುರುತಿಸಲಾಗಿದೆ. ಆನಂದ್ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.nice road-Car overturn-driver-death 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Collision –between- two bikes-Three deaths-on the spot.