ಅಮೂಲ್ಯ ಘೋಷಣೆಯಿಂದ ಪ್ರೇರಿತಳಾಗಿ ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ: ಪೊಲೀಸರಿಗೆ ಮಾಹಿತಿ ನೀಡಿದ ಆರ್ದ್ರಾ

kannada t-shirts

ಮೈಸೂರು, ಫೆಬ್ರವರಿ 22, 2020 (www.justkannada.in): ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಎದುರು ಆರ್ದ್ರಾ ಮಾಹಿತಿ ನೀಡಿದ್ದಾಳೆ.

ಫ್ರೀಡಂ ಪಾರ್ಕ್ ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ವೇಳೆ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು, ದೇಶ ದ್ರೋಹದ ಪ್ರಕರಣದಡಿ ಜೈಲಿನಲ್ಲಿದ್ದಾರೆ.

ಪೊಲೀಸರ ಮುಂದೆ ಭಿತ್ತಿಪತ್ರದ ಸತ್ಯವನ್ನು ಬಿಚ್ಚಿಟ್ಟದ್ದು ಪಿಜಿಯಲ್ಲಿ ಭಿತ್ತಿಪತ್ರ ತಯಾರು ಮಾಡಿದ್ದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಅಂದು ಫ್ರೀಡಂ ಪಾರ್ಕ್ ಗೆ ಹೋಗಿದ್ದ ಆರ್ದ್ರಾ ಅಲ್ಲಿ ನಡೆದ ಬೆಳವಣಿಗೆ ಅಮೂಲ್ಯ ಘೋಷಣೆ ಕೂಗಿದ್ದನ್ನು ಗಮನಿಸಿದ್ದಳು.

370ನೇ ವಿಧಿ ರದ್ದು, ಸಿಎಎ, ಎನ್.ಆರ್.ಸಿ. ವಿರುದ್ಧದ ಹೋರಾಟಗಳನ್ನು ಗಮನಿಸಿದ್ದು, ಭಿತ್ತಿಪತ್ರ ಹಿಡಿದು ಪ್ರತಿಭಟನೆ ಮಾಡಲು ಬಂದಿರುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ.

ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಗೂ ಆಗಮಿಸಿದ್ದಾರೆ ಅಮೂಲ್ಯ ಘೋಷಣೆ ಕೂಗುವುದನ್ನು ಕಣ್ಣಾರೆ ಕಂಡಿದ್ದರು. ಫ್ರೀಡಂ ಪಾರ್ಕ್ ಘಟನೆಯ ಬಳಿಕ ಪಿಜಿಗೆ ಹೋಗಿದ್ದು, ಪಕ್ಕದ ಅಂಗಡಿಯಲ್ಲಿ ಬಣ್ಣ ತಂದು ಭಿತ್ತಿಪತ್ರವನ್ನು ತಯಾರಿಸಿ ಪ್ರತಿಭಟನೆಗೆ ತಂದಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

website developers in mysore