ಹೊಸ ಮನೆ ಹಾಗೂ ಮನೆ ಶಿಫ್ಟ್ ಮಾಡಿದವರಿಗೂ ಉಚಿತ ವಿದ್ಯುತ್- ಇಂಧನ ಸಚಿವ ಕೆ.ಜೆ ಜಾರ್ಜ್.

ಬೆಂಗಳೂರು,ಜೂನ್,10,2023(www.justkannada.in): ಹೊಸ ಮನೆಗಳು ಹಾಗೂ ಮನೆ ಶಿಫ್ಟ್ ಮಾಡಿದವರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು  ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ಇಂದು ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಆರ್.ಆರ್ ನಂಬರ್ ಗೆ ವೋಟರ್ ಲಿಂಕ್ ಆಗಿದ್ರೆ ಸಾಕು. ಉಚಿತ ವಿದ್ಯುತ್ ನೀಡಲಾಗುತ್ತದೆ.  ಮನೆ ಅಗ್ರಿಮೆಂಟ್  ಪತ್ರ ಇದ್ರೂ ಫ್ರಿ ವಿದ್ಯುತ್ ನೀಡುತ್ತೇವೆ.  ಅಡ್ರೆಸ್ ಇರುವ ಯಾವುದಾದರೂ ಐಡಿ ಕೊಡಿ ಸಾಕು ಎಂದರು.

ಆಗಸ್ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದ್ದು, ಜೂನ್ ತಿಂಗಳ ಬಿಲ್ ಮಾತ್ರ ಕಟ್ಟಬೇಕು. ಇನ್ನು ಕಲಬುರುಗಿಯಲ್ಲಿ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದ್ದು, ಜನರಿಗೆ ಯೋಜನೆ ಸರಳವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಸೋಮವಾರ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಯಲಿದ್ದು,  ಎಲ್ಲಾ ಗೊಂದಲಗಳಿಗೂ ಉತ್ತರ ನೀಡುತ್ತೇವೆ ಎಂದು ಕೆ.ಜೆ ಜಾರ್ಜ್ ಹೇಳಿದರು.

Key words:  Free- electricity -new house – house shifters-Energy Minister -KJ George.