ಬಾಡಿಗೆದಾರರು ಸೇರಿ ಎಲ್ಲರಿಗೂ ಫ್ರಿ ವಿದ್ಯುತ್: ಕಮರ್ಷಿಯಲ್ ಗೆ ಅನ್ವಯ ಆಗಲ್ಲ- ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಜೂನ್,6,2023(www.justkannada.in):  ಬಾಡಿಗೆದಾರರು ಸೇರಿ ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತೇವೆ. ಆದರೆ ಗೃಹಜ್ಯೋತಿ ಯೋಜನೆ ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ ಎಂದು ಸಿಎಂ ಸಿದ‍್ಧರಾಮಯ್ಯ ಸ್ಪಷ್ಟನೆ ನೀಡಿದರು.

ಈ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಬಾಡಿಗೆದಾರರಿಗೂ ಉಚಿತ ವಿದ್ಯುತ್ ನೀಡುತ್ತೇವೆ. 180 ಯೂನಿಟ್ ಬಳಸಿದ್ರೂ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎಂದರು.

ಬಿಜೆಪಿಗೆ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಯವರು ಕೊಟ್ಟ ಭರವಸೆಗಳನ್ನ ಈಡೇರಿಸಿದ್ದಾರಾ..?  ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಬಿಜೆಪಿ ಮೊಸರಲ್ಲಿಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ನೀರಾವರಿ ಯೋಜನೆಗೆ 1ಲಕ್ಷ ಕೋಟಿ ಕೊಡ್ತೀವಿ ಎಂದಿದ್ರು ಕೊಟ್ರಾ. ರೈತರ ಸಾಲಮನ್ನಾ ಮಾಡುತ್ತೇವೆ ಎಂದಿದ್ರ ಮಾಡಿದ್ರಾ..? ಅಧಿಕಾರದಲ್ಲಿದ್ದಾಗ  ಬಿಜೆಪಿ ಬರೀ ಲೂಟಿ ಮಾಡಿದರು ಎಂದು ಕಿಡಿಕಾರಿದರು.

Key words: Free electricity – all including –tenants-CM Siddaramaiah.