ಹಣ ದ್ವಿಗುಣಗೊಳಿಸಿ ಕೊಡುವುದಾಗಿ ವಂಚನೆ: ನಗರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲು.

ಚಿತ್ರದುರ್ಗ,ಡಿಸೆಂಬರ್,7,2021(www.justkannada.in): ಹಣ ದ್ವಿಗುಣಗೊಳಿಸಿ ಕೊಡುವುದಾಗಿ  ಹೇಳಿ ವಂಚನೆ ಎಸಗಿದ ಆರೋಪದ ಮೇಲೆ ಚಿತ್ರದುರ್ಗ ನಗರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ನಗರಸಭೆ  ಜೆಡಿಎಸ್ ಸದಸ್ಯ ಚಂಧ್ರಶೇಖರ್ ವಿರುದ್ದ ವಂಚನೆ ಕೇಸ್ ದಾಖಲಾಗಿದೆ. ದೊಡ್ಡಬಳ್ಳಾಪುರದ ನಾಗರಾಜ್ ಎಂಬುವವರಿಗೆ ಚಂದ್ರಶೇಖರ್ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.  6 ಲಕ್ಷ ರೂ. ಪಡೆದು 18 ಲಕ್ಷ ನೀಡುವವುದಾಗಿ ಹೇಳಿ. 18 ಲಕ್ಷ ಇದೆ ಎಂದು ಬ್ಯಾಗ್ ನೀಡಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ  ಚಂದ್ರ ಶೇಖರ್, ಮೂರ್ತಿ, ಮಂಜುನಾಥ್ ವಿರುದ್ದ ಪ್ರಕರಣ ದಾಖಲಾಗಿದೆ. ಚಂದ್ರಶೇಖರ್ ಹಲವು ವಂಚನೆ ಕೇಸ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಚಂದ್ರಶೇಖರ್ ಅಂಡ್ ಗ್ಯಾಂಗ್ ತಲೆಮರಿಸಿಕೊಂಡಿದ್ದು, ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Fraud – double money- Case-filed -against –Municipal- Council –Member-chithradurga