Saturday, September 12, 2026

BDA Apartments

ಯಾರೇ ನನ್ನ ಹೆಸರು ಬಳಸಿಕೊಂಡರೂ ಅಪರಾಧ: ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇ...
Home Front Page ಯಾರೇ ನನ್ನ ಹೆಸರು ಬಳಸಿಕೊಂಡರೂ ಅಪರಾಧ: ಪೊಲೀಸ್ ಆಯುಕ್ತರಿಗೆ  ದೂರು ನೀಡುತ್ತೇನೆ- ಡಿ.ಕೆ ಸುರೇಶ್

ಯಾರೇ ನನ್ನ ಹೆಸರು ಬಳಸಿಕೊಂಡರೂ ಅಪರಾಧ: ಪೊಲೀಸ್ ಆಯುಕ್ತರಿಗೆ  ದೂರು ನೀಡುತ್ತೇನೆ- ಡಿ.ಕೆ ಸುರೇಶ್

ಬೆಂಗಳೂರು,ಡಿಸೆಂಬರ್,28 ,2024 (www.justkannada.in): ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿಕೆ ಸುರೇಶ್, ಯಾರೇ ನನ್ನ ಹೆಸರು ಬಳಸಿಕೊಂಡರೂ ಅಪರಾಧ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ  ದೂರು ನೀಡುತ್ತೇನೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಂಸದ ಡಿ.ಕೆ ಸುರೇಶ್,  ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಅಂತಾ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ಐಶ್ವರ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಹೋಗಿದ್ದೆ. ಪೊಲೀಸ್ ಕಮೀಷನರ್ ​ಗೆ ಪತ್ರ ಬರೆದು ಸಮಗ್ರ ತನಿಖೆ ಮಾಡಿ ಶಿಕ್ಷೆ ನೀಡುವಂತೆ ಮನವಿ ಮಾಡುತ್ತೇನೆ. ಸಿನಿಮಾದವರು ಏನೇನ್ ಮಾಡ್ತಾರೋ, ಇದೆಲ್ಲ ಬರೋದು ಸಿನಿಮಾದವರಿಗೆ ತಾನೆ. ಪೊಲೀಸ್ ಆಧಿಕಾರಿಗಳ ಬಳಿ ಮಾತನಾಡುತ್ತೇನೆ. ಐಶ್ವರ್ಯ ಅವರು ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು, ಆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ನಮ್ಮಣ್ಣ ಬೇಜಾರ್ ಮಾಡ್ಕೊಂಡ್ ಬಿಟ್ಟಾನಂತೆ, ನನಗೆ ಗೊತ್ತಿಲ್ಲದೆ ಯಾರು ಇನ್ನೊಬ್ಬ ತಂಗಿ ಎಂದು. ನಾನೇ ಪೊಲೀಸರಿಗೆ ಪತ್ರ ಬರೆಯುತ್ತೇನೆ ಎಂದು ಡಿ ಕೆ ಸುರೇಶ್ ಹೇಳಿದರು.

ಡಿ ಕೆ ಸುರೇಶ್  ತಂಗಿ ಎಂದು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ   ಆರೋಪ ಕೇಳಿ ಬಂದಿತ್ತು. ಐಶ್ವರ್ಯ ಗೌಡ  ಎಂಬ ಮಹಿಳೆ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್​ ಮಾಲೀಕರು ದೂರು ನೀಡಿದ್ದಾರೆ.

Key words: uses, my name, criminal , D.K. Suresh