ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು.

ಬೆಳಗಾವಿ,ಏಪ್ರಿಲ್,14,2023(www.justkannada.in): ಘಟಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಘಟಪ್ರಭಾ ಪಟ್ಟಣದ ಧೂಪದಾಳ ಬಳಿ ಈ ಘಟನೆ ನಡೆದಿದೆ. ಸಂತೋಷ್ ಬಾಬು, ಅಜಯ್ ಬಾಬು, ಕೃಷ್ಣಬಾಬು, ಆನಂದ್ ಕೋಕರೆ ಮೃತಪಟ್ಟವರು. ಮೃತಪಟ್ಟವರು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಮೂಲದವರಾಗಿದ್ದು, ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಇನ್ನು ಘಟಪ್ರಭಾ ನದಿಗೆ ಈಜಲು ಆರು ಮಂದಿ ತೆರಳಿದ್ದರು. ಈ ಪೈಕಿ ನಾಲ್ಕು ಮಂದಿ ನೀರುಪಾಲಾಗಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Four youths- swimming – river –death-belagavi