Sunday, September 20, 2026

BDA Apartments

Home Front Page ಬಿಜೆಪಿ ಮತ್ತು ಜೆಡಿಎಸ್ ನಿಂದ ಇನ್ನೂ 25 ನಾಯಕರು ಕಾಂಗ್ರೆಸ್ ಗೆ ಬರ್ತಾರೆ- ಡಿ.ಕೆ ಶಿವಕುಮಾರ್.

ಬಿಜೆಪಿ ಮತ್ತು ಜೆಡಿಎಸ್ ನಿಂದ ಇನ್ನೂ 25 ನಾಯಕರು ಕಾಂಗ್ರೆಸ್ ಗೆ ಬರ್ತಾರೆ- ಡಿ.ಕೆ ಶಿವಕುಮಾರ್.

ಬೆಂಗಳೂರು,ಏಪ್ರಿಲ್,14,2023(www.justkannada.in):  ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಪುಟ್ಟಣ್ಣ ಸೇರಿ ಹಲವರು ಕಾಂಗ್ರೆಸ್​ಗೆ ಬಂದಿದ್ದಾರೆ. ಇನ್ನೂ 25 ನಾಯಕರು ಬಿಜೆಪಿ,  ಜೆಡಿಎಸ್ ​ನಿಂದ ಕಾಂಗ್ರೆಸ್​ ಗೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ತಿಳಿಸಿದರು.

ಇಂದು ಮಾತನಾಡಿದ ಡಿ.ಕೆ ಶಿವಕುಮಾರ್,  ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 60, ಜೆಡಿಎಸ್​ 24ಕ್ಕಿಂತ ಹೆಚ್ಚು ಸೀಟ್ ಗೆಲ್ಲಲ್ಲ. ಕಾಂಗ್ರೆಸ್​ 141ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಮತ್ತು ಜೆಡಿಎಸ್ ನಿಂದ ಇನ್ನೂ 25 ನಾಯಕರು ಕಾಂಗ್ರೆಸ್ ಗೆ ಬರ್ತಾರೆ dks

ನೀವು ಯಾರು ನಿಮ್ಮ ಮತದ ಮಾರಾಟ ಮಾಡಿಕೊಳ್ಳಬೇಡಿ. ಬೆಲೆ ಏರಿಕೆ ಗಗನದಲ್ಲಿ ಆದಾಯ ಪಾತಾಳದಲ್ಲಿದೆ. ನಾವೆಲ್ಲ ಸೇರಿ ನಿಮಗೆ ನಾಲ್ಕು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜೂನ್ ತಿಂಗಳಿನಿಂದ ಈ ಎಲ್ಲಾ ಯೋಜನೆಗಳು ಜಾರಿಯಾಗಲಿವೆ. ಸಂವಿಧಾನದ ಮುಖಾಂತರ ನಮಗೆಲ್ಲ ರಕ್ಷಣೆ ಸಿಗುತ್ತಿದೆ. ಸಂವಿಧಾನ, ರಾಷ್ಟ್ರ ಧ್ವಜ ಕಾಂಗ್ರೆಸ್ ಕೊಟ್ಟ ಕೊಡುಗೆ  ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: 25 more- leaders -BJP – JDS –join- Congress – DK Shivakumar.