ಮೈಸೂರು,ಜೂನ್,8,2026 (www.justkannada.in): ಮೈಸೂರು ನಗರ ಪೊಲೀಸರಿಂದ ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 1,40,00,000 ರೂ. ಮೌಲ್ಯದ 280 ಕೆ.ಜಿ. ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
ಮಹಮ್ಮದ್ ಜುಬೇರ್, ಮುದಾಸಿರ್ ಅಹಮದ್, ಅಬುಬಕರ್ ಸಿದ್ದಿಕ್, ಸೈಯದ್ ಮಜಾರ್ ಬಂಧಿತ ಆರೋಪಿಗಳು. ಮೈಸೂರು ನಗರದ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆಲನಹಳ್ಳಿ ಪೊಲೀಸ್ ಠಾಣಾ ಸರಹದ್ದು ಮಳವಳ್ಳಿ-ಮೈಸೂರು ಮುಖ್ಯರಸ್ತೆಯ ಗ್ರೀನ್‌ಕೌಂಟಿ ಲೇಔಟ್‌ನಲ್ಲಿರುವ ಹಸಿರು ಗೂಡು ನರ್ಸರಿ ಗೇಟ್ ಮುಂಭಾಗ ರಸ್ತೆಯಲ್ಲಿ ದಾಳಿ ಮಾಡಿ ಅಕ್ರಮವಾಗಿ ಗಾಂಜಾ ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಹಾಗೆಯೇ 1,40,00,000 ರೂ. ಮೌಲ್ಯದ 280 ಕೆ.ಜಿ ಗಾಂಜಾ ಹಾಗೂ ಗಾಂಜಾ ಸಾಗಾಣೆಗೆ ಬಳಕೆ ಮಾಡಿದ್ದ 1 ಈಚರ್ ಟ್ರಕ್ ಮತ್ತು 1 ಕಾರನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.
ಈ ಪ್ರಕರಣ ಹೊರತು ಪಡಿಸಿ ಕಳೆದ 3 ತಿಂಗಳಲ್ಲಿ ಒಟ್ಟು 12 ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಿ 28 ಆರೋಪಿಗಳನ್ನು ದಸ್ತಗಿರಿ ಮಾಡಿ 43 ಕೆ.ಜಿ. ಗಾಂಜಾ ಹಾಗೂ 164 ಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಜೊತೆಗೆ 36 ಸೇವನೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
Key words: Four arrested, transporting, illegal, marijuana, Mysore






