ಕುರುಬ ಸಮುದಾಯ ಎಸ್ ಟಿ ಗೆ ಸೇರಿಸುವ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಸಲಹೆ ಏನು?…

ಮೈಸೂರು,ಡಿಸೆಂಬರ್,04,2020(www.justkannada.in) :  ಕುರುಬ ಸಮುದಾಯ ಎಸ್ ಟಿ ಗೆ ಸೇರಿಸುವ ವಿಚಾರ ನನ್ನನ್ನು ವೀಕ್ ಮಾಡುವ ಉದ್ದೇಶವಾಗಿದೆ. ಇದು ಆರ್.ಎಸ್.ಎಸ್ ಕುತಂತ್ರವಾಗಿದೆ. ಸ್ವಾಮಿಜಿ ಹಾಗೂ ಸಮುದಾಯ ಇಬ್ಬರಿಗೂ ಹೇಳುತ್ತೇನೆ ಎಲ್ಲರು ಎಚ್ಚರಿಕೆಯಿಂದ ಇರಿ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

logo-justkannada-mysore

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯ ಎಸ್ಟಿಗೆ ಸೇರಿಸುವುದರಲ್ಲಿ ಸಮುದಾಯವನ್ನ ಒಡೆಯುವ ಹುನ್ನಾರವಿದೆ. ಈಶ್ವರಪ್ಪ ಹಾಗೂ ವಿಶ್ವನಾಥ್ ಹುಟ್ಟುಹಾಕಿದ ಹೋರಾಟ ಇದು ಎಂದರು.

ಇದಕ್ಕೆ‌ ಹೋರಾಟದ ಅಗತ್ಯ ಇದ್ಯಾ ಅನ್ನೋದೆ ನನ್ನ ಪ್ರಶ್ನೆ

Former-CM-Siddaramai-shepherding-community-ST-advice?

ಇದಕ್ಕೆ‌ ಹೋರಾಟದ ಅಗತ್ಯ ಇದ್ಯಾ ಅನ್ನೋದೆ ನನ್ನ ಪ್ರಶ್ನೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಕೇವಲ ಶಿಫಾರಸ್ಸು ಮಾಡಿದ್ರೆ ಸಾಕು. ನಾನು ಶಿಫಾರಸ್ಸು ಮಾಡುವಾಗ ಯಾವುದೇ ಹೋರಾಟ ಆಗಿರಲಿಲ್ಲ. ಹೀಗಾಗಿಯೂ, ನಾನು ಶಿಫಾರಸ್ಸು ಮಾಡಿದ್ದೆ. ಈಗ ಸುಮ್ಮನೆ ಹೋರಾಟ ಅಂತ ಹೇಳಿ‌ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ನಾನು ಮನವಿ ಮಾಡುತ್ತೇನೆ ಎಲ್ಲರು ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದರು.

key words : Former-CM-Siddaramai-shepherding-community-ST-advice?