ಕಾವೇರಿ ನೀರಿನ ಸ್ಥಿತಿ-ಗತಿ ಅಧ್ಯಯನಕ್ಕೆ ಕೇಂದ್ರ ತಂಡ ಕಳುಹಿಸಲಿ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆಗ್ರಹ.

ಬೆಂಗಳೂರು,ಸೆಪ್ಟಂಬರ್,25,2023(www.justkannada.in):  ಕಾವೇರಿ ನದಿ ನೀರಿನ ಸ್ಥಿತಿ-ಗತಿ ಬಗ್ಗೆ ತಿಳಿಯಲು ಅಧ್ಯಯನಕ್ಕೆ ಕೇಂದ್ರ ಸರ್ಕಾರ  ತಂಡವನ್ನ ಕಳುಹಿಸಬೇಕು‌ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಗ್ರಹಿಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ದೇವೇಗೌಡರು, ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪತ್ರ ಬರೆದಿದ್ದೇನೆ.  ಕಾವೇರಿ ನದಿ ವಿವಾದದ  ಬಗ್ಗೆ ಕೇಂದ್ರ ಸರ್ಕಾರ ಅರ್ಜಿ ಹಾಕಬೇಕು. ಕಾವೇರಿ ವ್ಯಾಪ್ತಿಯ ವಾಸ್ತವ ಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಕಳಿಸಬೇಕು. ಅಣೆಕಟ್ಟೆಗೆ ಖುದ್ದು ಹೋಗಿ ಕುಮಾರಸ್ವಾಮಿ ಪರಿಶೀಲನೆ ಮಾಡಿದ್ದಾರೆ. ಕುಮಾರಸ್ವಾಮಿ ಡ್ಯಾಂ ಸೈಟ್ ಗೆ ಹೋಗಿ ಮಾಹಿತಿ ಪಡೆದಿದ್ದಾರೆ. ತಮಿಳುನಾಡಿನವರೂ ಬದುಕಬೇಕು ನಾವು ಬದುಕಬೇಕು ಎಂದರು.

ಪ್ರತಿಭಟನೆ, ರಾಜಕೀಯ ನಿರ್ಣಯದ ಬಗ್ಗೆ ಮಾತನಾಡಲ್ಲ. ರಾಜ್ಯಸಭೆಯಲ್ಲಿ ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದೇನೆ.  ನನ್ನ ಶಕ್ತಿ ಎಲ್ಲಾ ಬಳಕೆ ಮಾಡಿ ಎದ್ದು ನಿಂತು ಅಲ್ಲಿ ಮಾತನಾಡಿದ್ದೇನೆ’ ರಾಜ್ಯಸಭೆಯಲ್ಲಿ ಕಾವೇರಿ ಬಗ್ಗೆ ಮಾತನಾಡುವಾಗ ಕಣ್ಣೀರು ಬಂತು ಎಂದರು.

Key words: Former PM-HD Deve Gowda- demands – central team -study – Cauvery water.