ತಂಬಾಕು ಮಂಡಳಿ ನಿರ್ದೇಶಕರಾಗಿ ಮಾಜಿ ಶಾಸಕ ಎಚ್‌. ಸಿ ಬಸವರಾಜು ನೇಮಕ.

ಮೈಸೂರು,ಜೂನ್,4,2022(www.justkannada.in):  ತಂಬಾಕು ಮಂಡಳಿ ನಿರ್ದೇಶಕರಾಗಿ ಪಿರಿಯಾಪಟ್ಟಣ ಮಾಜಿ ಶಾಸಕ ಎಚ್.ಸಿ.ಬಸವರಾಜು ಅವರನ್ನು ನೇಮಿಸಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆದೇಶ ಹೊರಡಿಸಿದೆ.

ಇವರಲ್ಲದೇ ಕರ್ನಾಟಕದ ಎಚ್.ಆರ್.ದಿನೇಶ್, ಮಿಟ್ಟಪಲ್ಲಿ ರಮೇಶ್‌ ಬಾಬು, ಆಂಧ್ರಪ್ರದೇಶದ ಪೋಡಾ ವರಪ್ರಸಾದರಾವ್, ಕೊಪ್ಪುರವರಿ ರಮೇಶಬಾಬು ಅವರನ್ನು ಮುಂದಿನ ಮೂರು ವರ್ಷದ ಅವಧಿಗೆ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಇಲಾಖೆ ಜಂಟಿ ‌ಕಾರ್ಯದರ್ಶಿ ದಿವಾಕರನಾಥ ಮಿಶ್ರ ತಿಳಿಸಿದ್ಧಾರೆ.

ಮಾಜಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರ ಪುತ್ರರಾಗಿರುವ ಬಸವರಾಜು ಅವರು ಜಿಲ್ಲಾಪರಿಷತ್ ಪ್ರತಿಪಕ್ಷ ನಾಯಕರಾಗಿ ಹಾಗೂ 1999ರಿಂದ 2004ರವರೆಗೆ ಪಿರಿಯಾಪಟ್ಟಣ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದಾರೆ.

Key words: Former MLA-H.C Basavaraju- director – Tobacco Board-Appointed