ಮಾಜಿ ಸಚಿವ ಜನಾರ್ಧನರೆಡ್ಡಿಗೆ ಸಂಕಷ್ಟ: ಸಿಆರ್ ಪಿಸಿ ಸೆ.409ರಡಿ ವಿಚಾರಣೆಗೆ ಹೈಕೋರ್ಟ್ ಅಸ್ತು…

ಬೆಂಗಳೂರು,ಅ,18,2019(www.justkannada.in):  ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಸಿ.ಆರ್ ಪಿಸಿ ಸೆಕ್ಷನ್ 409ರಡಿ ಪ್ರಕರಣ ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ದದ ಪ್ರಕರಣ ಸಂಬಂಧ  ವಿಶೇಷ ಕೋರ್ಟ್ ಸಿಆರ್ ಪಿಸಿ ಸೆಕ್ಷನ್ 409ರಡಿ  ವಿಚಾರಣೆ  ಕೈಬಿಟ್ಟಿತ್ತು. ಇದನ್ನ ಪ್ರಶ್ನಿಸಿ ಸಿಬಿಐ  ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣ ಸಂಬಂಧ ಸಿಆರ್ ಪಿಸಿ ಸೆಕ್ಷನ್ 409ರಡಿ ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಿದೆ.

ಸಿಆರ್ ಪಿಸಿ ಸೆಕ್ಷನ್ 409(ಕ್ರಿಮಿನಲ್ ವಿಶ್ವಾಸದ್ರೋಹ)ರಡಿ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.

Key words: former minister- Janardhan Reddy-High Court -hearing -under CR PC Sec.409