Friday, October 2, 2026

BDA Apartments

Mysore dasara BDA JK_Adv BDA Adv
Home Front Page ಸಾವರ್ಕರ್ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾದ ಮಾಜಿ ಸಿಎಂ ಸಿದ್ಧರಾಮಯ್ಯ…

ಸಾವರ್ಕರ್ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾದ ಮಾಜಿ ಸಿಎಂ ಸಿದ್ಧರಾಮಯ್ಯ…

ಮಂಗಳೂರು,ಅ,18,2019(www.justkannada.in):  ಮಹಾತ್ಮ ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದವರಲ್ಲಿ ವಿ.ಡಿ ಸಾವರ್ಕರ್ ಕೂಡ ಒಬ್ಬರು  ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ನೀಡಿರುವ ಹೇಳಿಕೆ  ವಿವಾದಕ್ಕೆ ಗುರಿಯಾಗಿದೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಈ ವಿಚಾರ ಪ್ರಸ್ತಾಪಿಸಿದ ಸಿದ್ಧರಾಮಯ್ಯ,  ಗೂಡ್ಸೆ ಹಿಂದೆ ನಿಂತು ಗಾಂಧಿ ಹತ್ಯೆಗೆ ಸಾವರ್ಕರ್ ಸಂಚು ರೂಪಿಸಿದ್ದರು. ಆದರೆ ಸೂಕ್ತ ಸಾಕ್ಷಿ ಇಲ್ಲದೇ ಆರೋಪಿಯಾಗಿ ಗುರುತಿಸಲು ಆಗಲಿಲ್ಲ. ಅಂತಹ ವ್ಯಕ್ತಿಗೆ ಕೇಂದ್ರ ಸರ್ಕಾರ ಭಾರತ ರತ್ನ ಕೊಡಲು ಮುಂದಾಗಿದೆ. ಹಾಗೆಯೇ ಗೋಡ್ಸೆಗೂ ಭಾರತ ರತ್ನ ಕೊಟ್ಟು ಬಿಡಲಿ ಎಂದು ಲೇವಡಿ ಮಾಡಿದರು.

ಸಾವರ್ಕರ್​ ಅವರಿಗೆ ಭಾರತ ರತ್ನ ನೀಡುವ ಬಗ್ಗೆ  ಮಹಾರಾಷ್ಟ್ರ ಸರ್ಕಾರ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ  ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: former CM Siddaramaiah- controversy – statement – Savarkar