Friday, August 21, 2026

BDA Apartments

Home Front Page ಶಾಸಕರನ್ನ ಹೆಚ್.ಡಿಕೆ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಈಗ ಸಿದ್ದರಾಮಯ್ಯ ಮೇಲೆ ಆರೋಪ ಎಷ್ಟು ಸರಿ..?- ಮಾಜಿ ಸಚಿವ...

ಶಾಸಕರನ್ನ ಹೆಚ್.ಡಿಕೆ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಈಗ ಸಿದ್ದರಾಮಯ್ಯ ಮೇಲೆ ಆರೋಪ ಎಷ್ಟು ಸರಿ..?- ಮಾಜಿ ಸಚಿವ ಹೆಚ್.ಎಂ ರೇವಣ್ಣ ಕಿಡಿ…

ನವದೆಹಲಿ,ಅ,25,2019(www.justkannada.in):  ಸಮ್ಮಿಶ್ರ ಸರ್ಕಾರದ ವೇಳೆ ಹೆಚ್.ಡಿ ಕುಮಾರಸ್ವಾಮಿ ಶಾಸಕರನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ.  ಕುಮಾರಸ್ವಾಮಿ ಸರಿಯಾಗಿ ನಡೆದುಕೊಂಡಿದ್ದೇ ಏನು ಆಗುತ್ತಿರಲಿಲ್ಲ ಎಂದು  ಮಾಜಿ ಸಚಿವ ಹೆಚ್.ಎಂ ರೇವಣ್ಣ ಕಿಡಿಕಾರಿದರು.

ನವದೆಹಲಿಯಲ್ಲಿ ಇಂದು ಮಾತನಾಡಿ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಹೆಚ್ಎಂ ರೇವಣ್ಣ, ಕುಮಾರಸ್ವಾಮಿ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈ ಬಗ್ಗೆ ಜೆಡಿಎಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕೇಳಿದ ಯಾವ ಕೆಲಸವನ್ನು ಹೆಚ್ಡಿಕೆ ಮಾಡಿಕೊಡುತ್ತಿರಲಿಲ್ಲ‌. ನಮ್ಮ ಜತೆ ಚೆನ್ನಾಗಿ ಮಾತನಾಡುತ್ತಿದ್ದರೇ ಹೊರತು ನಮ್ಮ ಯಾವ ಕೆಲಸವನ್ನು ಮಾಡಿಕೊಡುತ್ತಿರಲಿಲ್ಲ. ಅವರ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿ ಗೆ ಸಾಧ್ಯವಾಗಲಿಲ್ಲ. ಈಗ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಚುನಾಯಿತ ಪ್ರತಿನಿಧಿಗಳನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡಿಲ್ಲದ್ದೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಹೆಚ್.ಎಂ.ರೇವಣ್ಣ ತಿರುಗೇಟು ನೀಡಿದರು.

Key words: former minister- HMRevanna-outrage-against- hd kumaraswamy