ಹೆಚ್.ವಿಶ್ವನಾಥ್ ಟೀಕೆಗೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ…

ಮೈಸೂರು,ಫೆಬ್ರವರಿ,13,2021(www.justkannada.in): ಅಹಿಂದ ಹೋರಾಟದಲ್ಲಿ ಕೆಸರೆರಾಚಾಟ ಶುರುವಾಗಿದ್ದು, ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಮತ್ತು ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ನಡುವೆ ಮಾತಿನ ವಾಗ್ವಾದ ನಡೆದಿದೆ.jk

ಇದು ಯಾವ ಅಹಿಂದ ಹೋರಾಟವೂ ಅಲ್ಲ, ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಅವರ ಸ್ವಾರ್ಥದ ಹೋರಾಟ ಎಂದು ಟೀಕಿಸಿದ್ದ ಎಂಎಲ್ ಸಿ ಹೆಚ್. ವಿಶ್ವನಾಥ್ ಗೆ  ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಟ್ವಿಟ್ಟರ್ ನಲ್ಲೇ ತಿರುಗೇಟು ನೀಡಿದ್ದಾರೆ.Former minister- HC Mahadevappa - reacted - Twitter –MLC- H.Vishwanath

ಮತಸಂತೆಯಲ್ಲಿ ತನ್ನನ್ನು ಮಾರಿಕೊಂಡ ವಿಶ್ವನಾಥ್ ಕಥೆ ಏನೆಂಬುದು ಎಲ್ಲರಿಗೂ ತಿಳಿದಿದೆ. ವಿಶ್ವನಾಥ್ ಅವರಿಗೆ ಯಾವುದೇ ಸಿದ್ದಾಂತವಿಲ್ಲ, ಹೀಗಾಗಿಯೇ ಹಿಂದುಳಿದ ವರ್ಗಗಳ ಹರಿಕಾರರಾದ ದೇವರಾಜ ಅರಸು ಅಂತಹ ನಾಯಕನ ಬೆನ್ನಿಗೆ ಚೂರಿ ಹಾಕಿದರು ಎಂದು ಟ್ವಿಟ್ಟರ್ ನಲ್ಲಿ ಹೆಚ್. ವಿಶ್ವನಾಥ್  ವಿರುದ್ಧ ಹೆಚ್.ಸಿ ಮಹದೇವಪ್ಪ ಕಿಡಿ ಕಾರಿದ್ದಾರೆ.

Key words: Former minister- HC Mahadevappa – reacted – Twitter –MLC- H.Vishwanath