Sunday, August 23, 2026

BDA Apartments

Home Front Page ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಪರೋಕ್ಷ ಟಾಂಗ್: ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕೈ ಬಿಟ್ರೂ ನಾವು...

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಪರೋಕ್ಷ ಟಾಂಗ್: ಸಿದ್ದರಾಮಯ್ಯರನ್ನ ಕಾಂಗ್ರೆಸ್ ಕೈ ಬಿಟ್ರೂ ನಾವು ಕೈ ಬಿಡಲ್ಲ ಎಂದ ಸಚಿವ ಸಿ.ಟಿ ರವಿ…

ಮೈಸೂರು,ಸೆ,10,2019(www.justkannada.in):  ಭ್ರಷ್ಟಾಚಾರ ಮಾಡದಿದ್ರೆ ಭಯವೇಕೆ..? ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದು ತಪ್ಪಾ..? ಎಂದು ಸಚಿವ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಪರೋಕ್ಷ ಟಾಂಗ್ ಕೊಟ್ಟ ಸಚಿವ ಸಿ.ಟಿ ರವಿ, ನಾನು ಒಕ್ಕಲಿಗ ಸಮುದಾಯದವನು.  ಭ್ರಷ್ಟಾಚಾರ ಯಾರು ಮಾಡಿದ್ದಾರೋ ಅವರಿಗೆ ಭಯವಾಗುತ್ತದೆ.ನನ್ನ ಸಮುದಾಯಕ್ಕೆ ಹೇಳ್ತಿನಿ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಡಿ.ಕೆ ಶಿವಕುಮಾರ್ ಬಂಧನ ಸಮುದಾಯದ ವಿರುದ್ದ ಅಂತಾ ಯಾಕೆ ಅಂತಿರಾ..? ನನ್ನ ಆಸ್ತಿ 18 ಎಕರೆ ಇದೆ. ಅದು 180 ಎಕರೆ ಆದ್ರೆ ಉತ್ತರಿಸಲೇಬೇಕು ಎಂದು ಹೇಳಿದರು.

ಹಾಗೆಯೇ ಸಿದ್ಧರಾಮಯ್ಯರನ್ನ ಕಾಂಗ್ರೆಸ್ ಕೈ ಬಿಟ್ಟರೂ ನಾವು ಕೈ ಬಿಡಲ್ಲ. ಸಿದ್ದರಾಮಯ್ಯರನ್ನ ಸೇರಿಸಿಕೊಂಡೆ ದಸರಾಹಬ್ಬ ಆಚರಣೆ ಮಾಡುತ್ತೇವೆ. ಸಿದ್ಧರಾಮಯ್ಯ ನಿತ್ಯ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ಸಿ.ಟಿ ರವಿ ತಿಳಿಸಿದರು.

Key words: former Minister- DK Sivakumar- Siddaramaiah-mysore- minister-CT Ravi