ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಅ.17ಕ್ಕೆ ಮುಂದೂಡಿಕೆ….

ನವದೆಹಲಿ,ಅ,15,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನ  ಅಕ್ಟೋಬರ್ 17ಕ್ಕೆ  ನವದೆಹಲಿ ಹೈಕೋರ್ಟ್ ಮುಂದೂಡಿದೆ.

ಇಂದು ಮಧ್ಯಾಹ್ನ  ದೆಹಲಿ ಹೈಕೋರ್ಟ್  ಡಿ.ಕೆ ಶಿವಕುಮಾರ್  ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಇನ್ನು ಕೋರ್ಟ್ ನಲ್ಲಿ ಡಿ.ಕೆ ಶಿವಕುಮಾರ್ ಪರ ಒಂದು ಗಂಟೆಗಳ ಕಾಲ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, , ಆದಾಯ ತೆರಿಗೆ ಆಕ್ಟ್ ಅಡಿ ಕೇಸ್ ದಾಖಲಾಗಿದೆ. ಇದು ಪಿಎಂಎಲ್ ಎ ಅಡಿ  ಕೇಸ್ ದಾಖಲಿಸಲು ಬರಲ್ಲ 120 ಬಿ ಶೆಡ್ಯುಲ್ ನಲ್ಲಿ ಬರಲ್ಲ. ಡಿಕೆ ಶಿವಕುಮಾರ್ 45 ದಿನಗಳಿಂದ ಕಸ್ಟಡಿಯಲ್ಲಿದ್ದಾರೆ. ಇದು ಬಂಧಿಸುವಂತಹ ಕೇಸ್ ಅಲ್ಲ. ಅನಾರೋಗ್ಯದ ನಡುವೆಯೂ ಡಿ.ಕೆ ಶಿವಕುಮಾರ್ ಇಡಿ ವಿಚಾರಣೆಗೆ ಸಹಕರಿಸಿದ್ದಾರೆ ಎಂದು ವಾದ ಮಂಡಿಸಿದರು.

ಜಾಮೀನು ಸಿಗಬಾರದು ಅಂತಾ ಇಡಿ ಅಧಿಕಾರಿಗಳು, ಡಿಕೆ ಶಿವಕುಮಾರ್ ಸಾಕ್ಷ್ಯ ನಾಶ ಪಡಿಸುತ್ತಾರೆಂದು ಆರೋಪಿಸಿದ್ದಾರೆ.  ಇದು ಸಾಕ್ಷ್ಯ ನಾಶಪಡಿಸುವಂತಹ ಕೇಸ್ ಅಲ್ಲ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ  ಕೋರ್ಟ್ ಗೆ ತಿಳಿಸಿದರು. ಇನ್ನು ಅರ್ಜಿ ವಿಚಾರಣೆಯನ್ನ ಕೋರ್ಟ್ ಗುರುವಾರ ಮಧ್ಯಾಹ್ನ 3.30ಕ್ಕೆ  ಮುಂದೂಡಿದೆ.

 

Key words: Former Minister- DK Sivakumar –postpones- bail application- hearing