ಆನೆ ದಾಳಿಗೆ ಬಾಳೆ ಬೆಳೆ ನಾಶ: ಸೂಕ್ತ ಪರಿಹಾರಕ್ಕೆ ರೈತರಿಂದ ಒತ್ತಾಯ….

ಮೈಸೂರು,ಅ,15,2019(www.justkannada.in):  ಆನೆ ದಾಳಿಯಿಂದಾಗಿ ರೈತ ಬೆಳೆದಿದ್ದ ಬಾಳೆ ಬೆಳೆ ನಾಶವಾಗಿದ್ದು ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಕಾಟವಾಳು ಗ್ರಾಮದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಆನೆ ದಾಳಿಯಿಂದ ರೈತರು  ಕಂಗಾಲಾಗಿದ್ದಾರೆ. ಕಾಟವಾಳು ಗ್ರಾಮದ ಬಸವರಾಜಪ್ಪ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಒಂದು ಎಕರೆ ಪ್ರದೇಶದ ಬಾಳೆಯನ್ನು ಆನೆ  ತುಳಿದು ತಿಂದು ನಾಶಮಾಡಿದೆ.

ಹೀಗಾಗಿ ಕೈಗೆ ಬಂದರೂ ಬಾಯಿ ಬಾರದ ಸ್ಥಿತಿ ರೈತರದ್ಧಾಗಿದೆ. ಅದ್ದರಿಂದ ನಾಶವಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ರೈತರು ಒತ್ತಾಯಿಸಿದ್ದಾರೆ.

Key words: Destroy – banana crop – elephant- attacks-mysore- farmer