Saturday, September 19, 2026

BDA Apartments

ಮಾಜಿ ಸಚಿವ ಸಿ.ಎಚ್ ವಿಜಯ್ ಶಂಕರ್ ಮತ್ತೆ ಬಿಜೆಪಿ ಸೇರ್ಪಡೆ ಖಚಿತ… BDA JK_Adv BDA Adv
Home Front Page ಮಾಜಿ ಸಚಿವ ಸಿ.ಎಚ್ ವಿಜಯ್ ಶಂಕರ್ ಮತ್ತೆ ಬಿಜೆಪಿ ಸೇರ್ಪಡೆ ಖಚಿತ….

ಮಾಜಿ ಸಚಿವ ಸಿ.ಎಚ್ ವಿಜಯ್ ಶಂಕರ್ ಮತ್ತೆ ಬಿಜೆಪಿ ಸೇರ್ಪಡೆ ಖಚಿತ….

ಮೈಸೂರು,ನ,4,2019(www.justkannada.in) ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನಪ್ಪಿದ ಮಾಜಿ ಸಚಿವ ಸಿ.ಎಚ್ ವಿಜಯ್ ಶಂಕರ್ ಇದೀಗ ಮತ್ತೆ ಕಮಲ ಮುಡಿಯಲು ಸಜ್ಜಾಗಿದ್ದಾರೆ.

ಮಾಜಿ ಸಚಿವ ಸಿ ಎಚ್ ವಿಜಯ್ ಶಂಕರ್ ಮತ್ತೆ ಬಿಜೆಪಿ ಸೇರ್ಪಡೆಯಾಗೋದು ಖಚಿತವಾಗಿದ್ದು , ನಾಳೆ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಎಚ್ ವಿಜಯ್ ಶಂಕರ್, ಸಕ್ರಿಯ ರಾಜಕಾರಣದಲ್ಲಿ ಉಳಿದುಕೊಳ್ಳಬೇಕು. ಬಿಜೆಪಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಬಿಜೆಪಿ ಆಹ್ವಾನವನ್ನ ಸ್ವೀಕರಿಸಿ ಮತ್ತೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದಿದ್ದಾರೆ.

ಧ್ರುವನಾರಯಣ್ ಹಿಂದೆ ಯಾವ ಪಕ್ಷದಲ್ಲಿದ್ರು- ಸಿಹೆಚ್ ವಿ ಟಾಂಗ್..

ಅವಕಾಶವಾದ ರಾಜಕಾರಣಿ ಸಿ ಎಚ್ ಎಂದಿದ್ದ ಮಾಜಿ ಸಂಸದ ಧ್ರುವನಾರಾಯಣ್ ಗೆ ಟಾಂಗ್ ಕೊಟ್ಟ ಸಿಎಚ್  ವಿಜಯ್ ಶಂಕರ್,  ಸಿದ್ದರಾಮಯ್ಯ ಬೆಳೆದು ಹೆಮ್ಮರವಾಗಿದ್ದಾರೆ. ನಾವು ಪಾರ್ಟಿ ಬಿಡೊದ್ರಿಂದ ಅವ್ರಿಗೇನು ತೊಂದರೆ ಆಗೊಲ್ಲ. ನನ್ನ ಅಸ್ಥಿತ್ವ ಕಾಪಾಡಿಕೊಳ್ಳಲು ಕಾಂಗ್ರೆಸ್ ಬಿಡುತ್ತಿದ್ದೇನೆ. ನಾನು ಅವಕಾಶವಾದಿ ರಾಜಕಾರಣಿ ಅಲ್ಲ. ಧ್ರುವನಾರಯಣ್ ಹಿಂದೆ ಯಾವ ಪಕ್ಷದಲ್ಲಿದ್ರು. ಅವ್ರು ಬಿಜೆಪಿ ಸೇರಿದ್ದು ಅವಕಾಶವಾದ ರಾಜಕಾರಣ ಅಲ್ವಾ ? ಎಂದು ಹೇಳಿದರು.

ನಾನು ಬಿಜೆಪಿ ಆಹ್ವಾನ ಸ್ವೀಕರಿಸಿದ್ದೇನೆ. ನನ್ನ ಅನುಭವವನ್ನ ಬಿಜೆಪಿ ಬಳಸಿಕೊಳ್ಳಲಿದೆ ಅನ್ನೊ ಆಶಾಭಾವನೆ ಇದೆ. ಪಕ್ಷ ನನ್ನು ಸುಮ್ಮನೆ ಕೂರಲು ಬಿಡೊಲ್ಲ ಅನ್ನೊ ನಂಬಿಕೆ ಇದೆ ಎಂದು ತಿಳಿಸಿದರು.

Key words: Former minister- C Vijay Shankar –confirm-rejoin -BJP