Thursday, August 13, 2026

BDA Apartments

Home Cinema ಮಾಜಿ ಐಎಎಸ್​ ಅಧಿಕಾರಿ, ನಟ ಕೆ. ಶಿವರಾಮ್ ನಿಧನ: ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ.

ಮಾಜಿ ಐಎಎಸ್​ ಅಧಿಕಾರಿ, ನಟ ಕೆ. ಶಿವರಾಮ್ ನಿಧನ: ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ.

ಬೆಂಗಳೂರು,ಫೆಬ್ರವರಿ,29,2024(www.justkannada.in): ಹೃದಯಾಘಾತಕ್ಕೆ ಒಳಗಾಗಿ ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಚಿಕಿತ್ಸೆಯನ್ನು ಪಡೆಯುತ್ತಿದ್ದ ಮಾಜಿ ಐಎಎಸ್ ಅಧಿಕಾರಿ, ಖ್ಯಾತನಟ, ರಾಜಕಾರಣಿ ಕೆ.ಶಿವರಾಮ್ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಕೆ.ಶಿವರಾಮ್ ಅವರ ಅಳಿಯ ಪ್ರದೀಪ್, ಇಂದು ಕೆ.ಶಿವರಾಂ ಅವರು ನಿಧನರಾಗಿದ್ದು ನಾಳೆ ಬೆಳಿಗ್ಗೆ 7 ರಿಂದ  ಮಧ್ಯಾಹ್ನ 3 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ  ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಸಂಸ್ಕಾರ ಎಲ್ಲಿ ಮಾಡಬೇಕು  ಅಂತಾ ಇನ್ನೂ ನಿರ್ಧಾರವಾಗಿಲ್ಲ

ಕೆ.ಶಿವರಾಮ್ ಅವರ ಪತ್ನಿ ಮಲೇ ಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ ಅವರು ಬಂದ ಮೇಲೆ ಎಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದು ನಿರ್ಧರಿಸಲಾಗುತ್ತದೆ ಎಂದು ಪ್ರದೀಪ್ ತಿಳಿಸಿದ್ದಾರೆ.

ಶಿವರಾಮ್ ಅವರಿಗೆ 15 ದಿನಗಳ ಹಿಂದೆ ಅಧಿಕ ರಕ್ತದೊತ್ತಡದಿಂದ ಸಮಸ್ಯೆ ಆಗಿತ್ತು. ಇತ್ತೀಚೆಗೆ ಹೃದಯಾಘಾತ ಆಯಿತು. ಹೀಗಾಗಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಸಾವಿಗೂ ಮುನ್ನ ಅವರ ಮಿದುಳು ಕೂಡ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿಬಿಟ್ಟಿತ್ತು. ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Former IAS officer- actor -K. Shivaram -Death – tomorrow- funeral