ಬಜೆಟ್ ಗೂ ಮುನ್ನ ಅನುದಾನ ಕೋರಿ ಸಿಎಂ ಬಿಎಸ್ ವೈಗೆ ಪತ್ರ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ….

ಬಾಗಲಕೋಟೆ,ಫೆ,12,2020(www.justkannada.in):   ಇತ್ತೀಚೆಗಷ್ಟೆ ತಮ್ಮ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಮಾರ್ಚ್ 5 ರಂದು ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಈ ನಡುವೆ ಬಜೆಟ್ ಮಂಡನೆಗೆ ಇನ್ನು ಹಲವು ದಿನಗಳು ಬಾಕಿ ಇದ್ದು ಇದಕ್ಕೂ ಮುನ್ನವೇ ಮಾಜಿ  ಸಿಎಂ ಸಿದ್ಧರಾಮಯ್ಯ ಬದಾಮಿ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಕೋರಿ ಸಿಎಂ ಬಿಎಸ್ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆರೂರು ಏತ ನೀರಾವರಿ ಯೋಜನೆಗೆ 525 ಕೋಟಿ ರೂ ಕೆರೂರು ಪಟ್ಟಣಕ್ಕೆ ಒಳಚರಂಡಿ ನಿರ್ಮಾಣ, ಗುಳೇದಗುಡ್ಡದಲ್ಲಿ ಹೈನು ವಿಜ್ಞಾನ ಕಾಲೇಜು, ಜವಳಿ ಪಾರ್ಕ್​ಗೆ 50 ಕೋಟಿ ರೂ. ಬಾದಾಮಿಯಲ್ಲಿ ಬಹುಮಹಡಿ ಕಟ್ಟಡಕ್ಕೆ 25 ಕೋಟಿ ರೂ, ಅನುದಾನ ನೀಡುವಂತೆ ಕೋರಿ  ಮಾಜಿಸಿಎಂ ಸಿದ್ದರಾಮಯ್ಯ ಸಿಎಂ ಬಿಎಸ್ ವೈಗೆ ಪತ್ರ ಬರೆದಿದ್ದಾರೆ. ಫೆಬ್ರವರಿ 7 ರಂದೇ ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

Key words: Former CM – siddaramaiaha-BS Yeddyurappa-grant – budget.