ಕನ್ನಡಪರ ಹೋರಾಟಗಾರರ ವಿರುದ್ದ ಹಾಕಿರುವ ಕೇಸ್ ಹಿಂಪಡೆಯುವಂತೆ ಮಾಜಿ ಸಿಎಂ ಸಿದ‍್ಧರಾಮಯ್ಯ ಆಗ್ರಹ.

ವಿಜಯಪುರ,ಫೆಬ್ರವರಿ,11,2023(www.justkannada.in):  ಇಬ್ಬರು ಕನ್ನಡಪರ ಹೋರಾಟಗಾರರ ವಿರುದ್ದ ಹಾಕಿರುವ ರೌಡಿಶೀಟ್ ಹಿಂಪಡೆಯುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ವಿಜಯಪುರದ ಸಿಂದಗಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕನ್ನಡ ಹೋರಾಟಗಾರರ ವಿರುದ ಕೇಸ್ ಹಾಕಬಾರದು, ನೆಲ, ಜಲ ಭಾಷೆಗಾಗಿ ಹೋರಾಡಿದ್ದಾರೆ.  ಕೇಸ್ ಹಾಕಿದ್ರೆ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮಹಾಜನ ವರದಿಯಲ್ಲಿ ಬೆಳಗಾವಿ ನಮಗೆ ಸೇರಿದೆ ಅಂತಾ ಹೇಳಲಾಗಿದೆ ಅದರೂ ಕಾಲು ಕೆರೆದುಕೊಂಡು ಜಗಳಕ್ಕೆ ಬರುವುದು ಸರಿಯಲ್ಲ ಎಂದು ಎಂಇಎಸ್ ಗೆ ಸಿದ್ಧರಾಮಯ್ಯ ಚಾಟಿ ಬೀಸಿದರು.

ಸಿದ್ರಾಮುಲ್ಲಾಖಾನ್ ಎಂಬ ಸಿಟಿ ರವಿ ಹೇಳಿಕೆಗೆ ಕಿಡಿ ಕಾರಿದ ಸಿದ್ಧರಾಮಯ್ಯ, ನಾನು ಹಿಂದೂ ನಮ್ಮಪ್ಪ ಅವ್ವನೂ ಹಿಂದೂ ಸಿಟಿ ರವಿ ಹೇಳಿದ ತಕ್ಷಣ ಮುಸ್ಲೀಂ ಆಗ್ತೀನಾ..? ಹಿಂದುತ್ವದ ಬಗ್ಗೆ ಯಾರಿಗಾದ್ರೂ ಗೊತ್ತಿದ್ರೆ ತಿಳಿಸಿ ಎಂದರು.

ನಮ್ಮಅವಧಿಯಲ್ಲಿ 15 ಲಕ್ಷ ಮನೆ ಕೊಟ್ಟವು. ಎಲ್ಲಾ ಮನೆಗಳನ್ನ ಮುಸ್ಲೀಮರಿಗೆ ಕೊಟ್ಟಿಲ್ಲ ಶೇ.5 ರಷ್ಟು ಮುಸ್ಲೀಂರಿಗೆ ಮನೆಗಳನ್ನ ನೀಡಿದ್ದೇವೆ.  ಶೇ. 95 ರಷ್ಟು ಮನೆಗಳನ್ನ ಹಿಂದೂಗಳಿಗೆ ಕೊಟ್ಟವು. ಬಿಜೆಪಿಗೆ ನಿರುದ್ಯೋಗ ರೈತರ ಸಮಸ್ಯೆಗಳನ್ನ ಪರಿಹರಿಸಲು ಆಗುತ್ತಿಲ್ಲ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದರು ಆದರೆ ರೈತರ ಸಾಲ ಹೆಚ್ಚಾಗಿದೆ ಆದಾಯ ದ್ವಿಗುಣವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

Key words: Former CM –Siddaramaiah- withdrawal -case -against -pro-Kannada- fighters.