ತ್ರಿಭಾಷಾ ಶಿಕ್ಷಣ ನೀತಿ ಹಿಂದೆ‌ ಹೇರಿಕೆಯ ಹುನ್ನಾರ: ಇವಿಎಂಗಳ ಬಗ್ಗೆ ಮತ್ತೊಮ್ಮೆ ಸಂಶಯ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಜೂ,3,2019(www.justkannada.in): ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಫಲಿತಾಂಶ ನೋಡಿದರೆ ಇವಿಎಂ ಮೇಲಿನ ಅನುಮಾನವನ್ನ ಪುಷ್ಟಿಕರಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇವಿಎಂಗಳ ಬಗ್ಗೆ ಮತ್ತೋಮ್ಮೆ ಸಂಶಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಎದ್ವತದ್ವ ಲೀಡ್ ಬಂದಿತ್ತೋ ಅಲ್ಲೆಲ್ಲ  ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆ ಲೀಡ್ ಬಂದಿದೆ. ಬಿಜೆಪಿಯವರು ಇವಿಎಂ ಮ್ಯಾನಿಪ್ಲೇಟ್ ಮಾಡ್ತಾರೆ ಅನ್ನೋ ಅನುಮಾನ ಮತ್ತಷ್ಟು ದಟ್ಟವಾಗಿದೆ. ಪ್ರತಿ ಭಾರಿ ಚುನಾವಣೆಗಳಲ್ಲಿ ಜನರು ಸ್ಥಳಿಯ ವಿಚಾರಗಳ ಮೇಲೆ ಮತ ಹಾಕ್ತಾರೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಬಗ್ಗೆ ಗಮನ ಇಟ್ಟುಕೊಂಡು ಮತ ಹಾಕಿದ್ರು. ಸ್ಥಳೀಯ ಚುನಾವಣೆಯಲ್ಲಿ ಸ್ಥಳೀಯವಾದ ವಿಚಾರಗಳ ಮುಂದಿಟ್ಟುಕೊಂಡು ಮತ ಕೊಟ್ಟಿದ್ದಾರೆ. ಪ್ರತೀ ಚುನಾವಣೆಗಳಲ್ಲೂ ಕೂಡ ಫಲಿತಾಂಶಗಳಲ್ಲಿ ವ್ಯತ್ಯಾಸ ಇರುತ್ತದೆ. ಲೋಕಸಭಾ, ವಿಧಾನಸಭಾ, ಸ್ಥಳೀಯ ಚುನಾವಣೆಗಳಲ್ಲಿ ವ್ಯತ್ಯಾಸ ಇರುತ್ತದೆ ಎಂದು ಹೇಳಿದ್ದಾರೆ.

ದಕ್ಷಿಣ ಭಾರತ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತ್ರಿಭಾಷಾ ಶಿಕ್ಷಣ ನೀತಿ ಜಾರಿಗೆ ತರುತ್ತಿರುವುದು ಹಿಂದೆ‌ ಹೇರಿಕೆ ಹುನ್ನಾರ. ನಾವೇನಾದರು ಹಿಂದೆ ಭಾಷೆ ಬೇಕೆಂದು ಕೇಳಿಕೊಂಡಿದ್ವ. ಕೇಂದ್ರ‌ ಇದಕ್ಕೆ‌ ಪಾಲಿಸಿ ತರ್ತಿರೋದು ನಮ್ಮ ಮೇಲೆ ಬಲವಂತದ ಏರಿಕೆಯಾಗಿದೆ. ಅದ್ದರಿಂದ ನೆಲ‌ ಜಲ‌ ಭಾಷೆ ವಿಚಾರದಲ್ಲಿ ರಾಜಿಯಾಗಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾರೆ ನಾವು ತಮಿಳುನಾಡಿನಂತೆ ರಾಜ್ಯದಲ್ಲೂ ಹೋರಾಟ ಮಾಡಲು ಸಿದ್ದ ಎಂದು ಕೇಂದ್ರ ಸರ್ಕಾರಕ್ಕೆ  ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Key words: Former CM Siddaramaiah, who was skeptical about EVMs.

#mysore #siddaramaiah #skeptical #EVM