Sunday, August 2, 2026

BDA Apartments

Home Front Page ತವರು ಕ್ಷೇತ್ರದಲ್ಲಿ ಬಿಎಸ್ ವೈ ಗೆ ಮುಖಭಂಗ: ಶಿಕಾರಿಪುರ, ಶಿರಾಳಗುಪ್ಪದಲ್ಲಿ ಬಿಜೆಪಿಗೆ ಬಾರಿ ಹಿನ್ನಡೆ…

ತವರು ಕ್ಷೇತ್ರದಲ್ಲಿ ಬಿಎಸ್ ವೈ ಗೆ ಮುಖಭಂಗ: ಶಿಕಾರಿಪುರ, ಶಿರಾಳಗುಪ್ಪದಲ್ಲಿ ಬಿಜೆಪಿಗೆ ಬಾರಿ ಹಿನ್ನಡೆ…

ಶಿವಮೊಗ್ಗ,ಜೂ,3,2019(www.justkannada.in):  ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಹಿಗ್ಗಿದ್ದ ಬಿಜೆಪಿಗೆ ಇದೀಗ ಸ್ಥಳೀಯಸಂಸ್ಥೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ  ಸ್ವಕ್ಷೇತ್ರ ಶಿಕಾರಿಪುರದ ಪುರಸಭೆಯಲ್ಲಿ ಕಾಂಗ್ರೆಸ್ ಪಾರಮತ್ಯ ಸ್ಥಾಪಿಸಿದೆ. ಶಿಕಾರಿಪುರ ಪುರಸಭೆಯ 23 ವಾರ್ಡ್ ಗಳಲ್ಲಿ  ಕಾಂಗ್ರೆಸ್ 12 ಬಿಜೆಪಿ 8, ಪಕ್ಷೇತರ ಅಭ್ಯರ್ಥಿ ಮೂರು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಜತೆಗೆ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯಲ್ಲೂ  ಭಾರಿ ಹಿನ್ನಡೆಯಾಗಿದೆ. ಶಿರಳಕೊಪ್ಪ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಹೆಚ್ಚು ಸ್ಥಾನ ಗಳಿಸಿದೆ. 17 ವಾರ್ಡ್ ಗಳಲ್ಲಿ ಕಾಂಗ್ರೆಸ್ 7, ಜೆಡಿಎಸ್ 3, ಬಿಜೆಪಿ 2 ಹಾಗೂ ಪಕ್ಷೇತರರು 5 ವಾರ್ಡ್ ಗಳಲ್ಲಿ ಜಯ ಗಳಿಸಿದ್ದಾರೆ.

ಇನ್ನು ಸೊರಬ ಪಟ್ಟಣ ಪಂಚಾಯಿತಿಯಲ್ಲಿ  ಬಿಜೆಪಿ 3 ಕಾಂಗ್ರೆಸ್ 2 ಜೆಡಿಎಸ್ 1 ಪಕ್ಷೇತರ ಒಂದು ವಾರ್ಡ್ ಗಳಲ್ಲಿ ಜಯ ಸಾಧಿಸಿದ್ದಾರೆ.

Key words: BJP lose in Shikaripura, Shiralaguppa local body election

#Shivamogga #bsyeddyurappa #localbodyelection