ಓಬವ್ವ ಜಯಂತಿ ಮಾಡುವ ಬೊಮ್ಮಾಯಿ ಬೇಕೋ, ಟಿಪ್ಪು ಜಯಂತಿ ಮಾಡುವ ಸಿದ್ಧರಾಮಯ್ಯ ಬೇಕೋ..? ಸಚಿವ ಸುನೀಲ್ ಕುಮಾರ್ ಪ್ರಶ್ನೆ.

ಚಿತ್ರದುರ್ಗ,ಡಿಸೆಂಬರ್,28,2021(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಇಂಧನ ಸಚಿವ ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸುನೀಲ್ ಕುಮಾರ್,  ಕಾಂಗ್ರೆಸ್ ಸರ್ಕಾರ ಬರುವ ಭ್ರಮೆಯಲ್ಲಿದ್ದಾರೆ. ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ಕಾನೂನು ಟಿಪ್ಪು ಜಯಂತಿ ಕುರಿತು ಸಿದ್ಧರಾಮಯ್ಯ ಹೇಳುತ್ತಿದ್ದಾರೆ .ಕಾಂಗ್ರೆಸ್ ಜನರಿಗೆ ಯಾವ ಸಂದೇಶ ಕೊಡುತ್ತದೆ.  ಓಬವ್ವ ಜಯಂತಿ ಮಾಡುವ ಬೊಮ್ಮಾಯಿ ಬೇಕೋ…? ಟಿಪ್ಪು ಜಯಂತಿ ಮಾಡುವ ಸಿದ್ಧರಾಮಯ್ಯ ಬೇಕೋ …? ಎಂದು ಪ್ರಶ್ನಿಸಿದರು. ಬಲವಂತ ಮತಾಂತರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಬದಲಾವಣೆ ಊಹಾಪೋಹ. ಈ ಬಗ್ಗೆ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.  ನಿನ್ನೆ ಅರುಣ್ ಸಿಂಗ್ ಸಹ ಹೇಳಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವ ಸುನೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಬಂದ್ ಮಾಡುವ ಅನಿವಾರ್ಯತೆ ಇಲ್ಲ.  ಪುಂಡರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಗೃಹ ಇಲಾಖೆ ಎಚ್ಚರಿಸಿದೆ. ಇಂತ ಘಟನೆಯಾದಾಗ ಬಂದ್ ಮಾಡುವುದು ಸರಿಯಲ್ಲ. ಬಂದ್ ಕೈಬಿಡುವಂತೆ ಮನವಿ ಮಾಡಿದರು.

Key words: former CM-siddaramaiah-Question –Minister- Sunil Kumar